Publish Date: Tue, 13 Oct 2020 (11:17 IST)
Updated Date: Tue, 13 Oct 2020 (11:19 IST)
ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಮಾನಭಂಗ ಮಾಡಿದ ಆರೋಪಿಯನ್ನು ಬೆಂಗಳೂರು ಪೊಲೀಸರು ಗುಂಡೇಟು ನೀಡಿ ಸೆರೆ ಹಿಡಿದಿದ್ದಾರೆ.
ಚೆನ್ನೈ ಮೂಲದ ದಿನೇಶ್ ಎಂಬಾತ ಆರೋಪಿ. ಈತ ಮೆಜೆಸ್ಟಿಕ್ ಬಳಿ ಚಿಂದಿ ಆಯುವ ಕೆಲಸ ಮಾಡುತ್ತಿದ್ದ. ಎರಡು ದಿನದ ಹಿಂದೆ ಮೆಜೆಸ್ಟಿಕ್ ಬಳಿ ಆಟಿಕೆ ವ್ಯಾಪಾರ ಮಾಡುವ ಕುಟುಂಬವೊಂದರ ಹೆಣ್ಣು ಮಗುವನ್ನು ರಾತ್ರಿ ಅಪಹರಿಸಿ ಇನ್ನೊಂದೆಡೆ ಕರೆದೊಯ್ದು ಮಾನಭಂಗ ಮಾಡಿದ್ದ. ಈತನನ್ನು ಇದೀಗ ಎಎಸ್ಐ ವೆಂಕಟಪ್ಪ ನೇತೃತ್ವದ ತಂಡ ಸೆರೆ ಹಿಡಿದಿದೆ. ಆರೋಪಿ ಮಾಡಿದ ಹಲ್ಲೆಯಿಂದ ಪೊಲೀಸರಿಗೂ ಗಾಯವಾಗಿದೆ. ಆರೋಪಿಗೆ ಈ ಮೊದಲೇ ಅಪರಾಧದ ಹಿನ್ನಲೆಯಿತ್ತು ಎನ್ನಲಾಗಿದೆ.