Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ: ಆರೋಪಿಗಳು ಅಂದರ್

ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ: ಆರೋಪಿಗಳು ಅಂದರ್
ರಾಯಚೂರು , ಶನಿವಾರ, 27 ಅಕ್ಟೋಬರ್ 2018 (17:29 IST)
ಮಟ್ಕಾ ದಂಧೆ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ರಾಯಚೂರು ಜಿಲ್ಲೆಯ ಲಿಂಗಸೂಗೂರು ಪೊಲೀಸರು ದಾಳಿ ನಡೆಸಿ, ಇಬ್ಬರು ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಿಂಗಸೂಗೂರು ಪಟ್ಟಣದ ಅಜಾದ್ ನಗರದಲ್ಲಿ ಮಿಠಾಯಿ ಅಂಗಡಿ ಮುಂದೆ ಮಹ್ಮದ್ ದರ್ವೇಶ್ ಭಾವಾಸಾಬಬ್, ಜಾಮೀರ್ ಖಾಜಾಹುಸೇನ್ ಎನ್ನುವವರು ಮಟ್ಕಾ ದಂಧೆಯಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ. 

ಖಚಿತ ಮಾಹಿತಿ ಪಡೆದ ಲಿಂಗಸೂಗೂರು ಪೊಲೀಸರು ಅಡ್ಡೆಯ ಮೇಲೆ ದಾಳಿ ನಡೆಸಿ 20,353 ರೂ. ನಗದು ಹಾಗೂ  ಐದು ಮಟ್ಕಾ ಪಟ್ಟಿಯನ್ನ ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂಜೆಕ್ಷನ್ ನೀಡಿ ವಿದ್ಯಾರ್ಥಿಯನ್ನು ಯಮಲೋಕಕ್ಕೆ ಕಳಿಸಿದ ನಕಲಿ ಡಾಕ್ಟರ್ !