Publish Date: Sun, 19 Jul 2020 (15:43 IST)
Updated Date: Sun, 19 Jul 2020 (15:44 IST)
ಖಾಸಗಿ ಸಂಸ್ಥೆಗೆ ಸೇರಿದ್ದ ತೋಟವೊಂದರಲ್ಲಿ ವಿಷ ಹಾಕಿದ ಪರಿಣಾಮ 20 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ಸಮೀಪ ಐಗೂರು ಖಾಸಗಿ ಸಂಸ್ಥೆ ತೋಟದಲ್ಲಿ ಜಾನುವಾರುಗಳಿಗೆ ವಿಷ ಹಾಕಲಾಗಿದೆ.
ಇದರಿಂದ 20ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿವೆ. ಘಟನೆಗೆ ಸಂಬಂಧಿಸಿದಂತೆ ವ್ಯವಸ್ಥಾಪಕ ಮತ್ತು ಇತರ ಸಿಬ್ಬಂದಿಗಳ ವಿಚಾರಣೆ ನಡೆಸಿದ್ದಾರೆ ಪೊಲೀಸರು.
ಘಟನೆ ಕುರಿತು ಜಾನುವಾರುಗಳ ಮಾಲೀಕರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.