Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮಂಗಳೂರು : ಇಲ್ಲಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪಂದ್ಯಕಟ್ಟಿ ವಿದ್ಯಾರ್ಥಿನಿಯರಿಗೆ ಚುಂಬಿಸಿದ ವೀಡಿಯೋ ವೈರಲ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
8 ವಿದ್ಯಾರ್ಥಿಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ. ಬಾವುಟಗುಡ್ಡೆಯ ರೂಂನಲ್ಲಿ ವಿದ್ಯಾರ್ಥಿನಿಯರ ಜೊತೆ ಕಿಸ್ಸಿಂಗ್ ಪಂದ್ಯ ಮಾಡಿದ್ದ ವಿದ್ಯಾರ್ಥಿಗಳು, ಕಿಸ್ ನೀಡುವ ವೀಡಿಯೋವನ್ನೆಷ್ಟೇ ಅಲ್ಲದೇ ದೈಹಿಕ ಸಂಪರ್ಕದ ವಿಡಿಯೋಗಳು ತನಿಖೆ ವೇಳೆ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದು, ಪಂದ್ಯ ಕಟ್ಟಿ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಈ ವೀಡಿಯೋ ಹರಿದಾಡುತ್ತಿದೆ.
ವಿದ್ಯಾರ್ಥಿಗಳೆಲ್ಲಾ ಸೇರಿ ಟ್ರೂತ್ ಅಂಡ್ ಡೇರ್ ಗೇಮ್ಅನ್ನು ಆಡುತ್ತಿದ್ದರು. ಈ ವೇಳೆ ಪಂದ್ಯದ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ್ದಾನೆ. ತನ್ನ ಸಹಪಾಠಿಗಳ ಎದುರೇ ಖುಲ್ಲಂ ಖುಲ್ಲಾಗಿ ವಿದ್ಯಾರ್ಥಿಗಳು ಚುಂಬಿಸಿದ್ದು, ಈ ದೃಶ್ಯವನ್ನು ಉಳಿದವರು ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.