Publish Date: Fri, 28 Nov 2025 (09:13 IST)
Updated Date: Fri, 28 Nov 2025 (09:18 IST)
ಉಡುಪಿ: ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಲು ಇಂದು ಪ್ರಧಾನಿ ಮೋದಿ ಕೃಷ್ಣ ನಗರಿ ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಅವರು ಇಂದು ಒಟ್ಟು ಎಷ್ಟು ಗಂಟೆ ಅಲ್ಲಿರಲಿದ್ದಾರೆ, ಏನೇನು ಮಾಡಲಿದ್ದಾರೆ ಇಲ್ಲಿದೆ ವಿವರ.
ಇದು ಎರಡನೇ ಬಾರಿಗೆ ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಆದರೆ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆ ಹೊತ್ತಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಮೋದಿ ಬಂದಿಳಿಯಲಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡುವ ಮೊದಲು ಅರ್ಧಗಂಟೆ ರೋಡ್ ಶೋ ನಡೆಸಲಿದ್ದಾರೆ. ಬನ್ನಂಜೆ ಶ್ರೀ ನಾರಾಯಣ ಗುರು ಸರ್ಕಲ್ ನಿಂದ ಕಲ್ಲಸಂಕ ಸರ್ಕಲ್ ವರೆಗೂ ರೋಡ್ ಶೋ ನಡೆಯಲಿದೆ.
11.30 ಕ್ಕೆ ಮೋದಿ ಉಡುಪಿ ಕೃಷ್ಣ ಮಠ ರಾಜಾಂಗಣಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕನಕದಾಸರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಬಳಿಕ ಕನಕನ ಕಿಂಡಿಗೆ ಹೊದಿಸಿರುವ ಚಿನ್ನದ ಕವಚವನ್ನು ಅನಾವರಣಗೊಳಿಸಲಿದ್ದಾರೆ. ಈ ವೇಳೆ ಕೃಷ್ಣ ದೇವರ ದರ್ಶನ ಪಡೆಯಲಿದ್ದಾರೆ.
ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ 15 ನೇ ಅಧ್ಯಾಯವನ್ನು ಪಠಿಸಲಿದ್ದಾರೆ. ಒಟ್ಟು 50 ನಿಮಿಷ ಪ್ರಧಾನಿ ಮೋದಿ ಕೃಷ್ಣ ಮಠದಲ್ಲಿರಲಿದ್ದಾರೆ. ಈ ವೇಳೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಬಳಿಕ ಅವರು ಗೋವಾಗೆ ತೆರಳಲಿದ್ದಾರೆ.
Krishnaveni K
Publish Date: Fri, 28 Nov 2025 (09:13 IST)
Updated Date: Fri, 28 Nov 2025 (09:18 IST)