ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳ ಜೊತೆ ವರ್ಚ್ಯುವಲ್ ಮೂಲಕ ಸಂವಾದ ಕಾರ್ಯಕ್ರಮವನ್ನು ನಡೆಸಿದ್ರು. ಇದ್ರಲ್ಲಿ ಪ್ರಶಸ್ತಿಗೆ ಭಾಜನರಾದ ಎಲ್ಲಾ ಮಕ್ಕಳು ಭಾಗಿಯಾಗಿದ್ರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಧಾನಿ ಮೋದಿ ಎಲ್ಲಾ ಮಕ್ಕಳಿಗೆ ಅಭಿನಂದನೆ ಸಲ್ಲಿಸಿದ್ರು. ಮೊದಲ ಬಾರಿಗೆ ಬ್ಲಾಕ್ ಚೈನ್ ತಂತ್ರಜ್ಞಾನದ ಡಿಜಿಟಲ್ ಸರ್ಟಿಫಿಕೇಟ್ ನೀಡಿದ್ದು, ಪ್ರಶಸ್ತಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಎಂದು ಹೊಸ ನಾಮಕರಣ ಮಾಡಲಾಯ್ತು. ಸಂವಾದದ ಬಳಿಕ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸನ್ಮಾನಿಸಲಾಯ್ತು.
ಸಂಗೀತ ಮತ್ತು ಮನರಂಜನೆ ವಿಭಾಗದಲ್ಲಿ ಫತೀನ್ ಗೆ ಪ್ರಶಸ್ತಿ ಲಭಿಸಿದೆ. ಪಿಯಾನೋದಲ್ಲಿ 14 ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿರೋ ಸೈಯದ್, 3 ನೇ ವಯಸ್ಸಿನಿಂದಲೇ ಪಿಯಾನೋ ನುಡಿಸುತ್ತಿದ್ದ.ಲಂಡನ್ ವಿವಿಯಿಂದ ಸಂಗೀತ ಪದವಿ ಪಡೆದ ಕಿರಿಯ ಬಾಲಕ ಸೈಯದ್ ಆಗಿದ್ದಾರೆ. ಬೆಂಗಳೂರಿನ ಜೆಪಿನಗರದ ಸಂವೇದ ಹೈಸ್ಕೂಲ್ ನ 8 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಜಯನಗರದ ವೈದ್ಯದಂಪತಿ ಪುತ್ರ ಡಾ.ಸೈಯದ್ ಜಮೀರ್ ಅಹ್ಮದ್ ಮತ್ತು ಡಾ.ಅಸ್ಮಾ ದಂಪತಿ ಪುತ್ರನಾಗಿ ಹೆಮ್ಮೆಯನ್ನು ತಂದಿದ್ದಾರೆ. ಸಯ್ಯದ್‌ಗೆ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಇದ್ದು, ಇಡೀ ಭಾರತವನ್ನೇ ಈ ಕ್ಷೇತ್ರದಲ್ಲಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗುವ ರೀತಿ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಇದೆ.
ಜವಾಹರಲಾಲ್ ನವೋದಯ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯಾಗಿ ವ್ಯಾಸಾಂಗ ಮಾಡುತ್ತಿದ್ದಾರೆ. ವೇಸ್ಟ್ ಮ್ಯಾನೇಜ್ ಮೆಂಟ್ ಕುರಿತು ಅಧ್ಯಯನ ಮತ್ತು ಸೇವೆಗೆ ಪ್ರಶಸ್ತಿ ಬಂದಿದೆ. ಕ್ರೂಸ್ ಅನ್ನುವ ಸಂಸ್ಥೆ ಮೂಲಕ ನಡೆಸಿದಂತಹ ಕೆಲಸಗಳಿಗೆ ನನಗೆ ಪ್ರಶಸ್ತಿ ದೊರಕಿದೆ.
, ಲಾಕ್ ಡೌನ್ ಸಂದರ್ಭದಲ್ಲಿ ಮನೆಗೆ ಹೋದಾಗ ಪುಸ್ತಕ ತೆಗೆದುಕೊಳ್ಳಲು ಬಹಳ ಕಷ್ಟವಾಗುತ್ತಿತ್ತು ಹೀಗಾಗಿ, ಬಹಳಷ್ಟು ಮಕ್ಕಳಿಗೆ ಪುಸ್ತಕ ಪಡೆಯಲು ಕಷ್ಟವಾಗುತ್ತೆ ಹಾಗಾಗಿ ಪುಸ್ತಕಗಳ ರೀ ಯೂಸ್ ಬಗ್ಗೆ ಆಯಪ್ ಮಾಡಿರೋ ಅಭಿನವ್, ಇದ್ರಿಂದ ಹಳೆಯ ಪುಸ್ತಕಗಳನ್ನು ಮಾರಲು ಹಾಗೂ ತೆಗೆದುಕೊಳ್ಳಲು ಅನುಕೂಲವಾಗುವಂತಹ ಕೆಲಸ ಮಾಡಿದ್ದಾರೆ.