ಈ ಸಾಲಿನ ಚಾರ್‌ಧಾಮ್ ಯಾತ್ರೆ ಮೇ 3 ರಿಂದ ಆರಂಭಗೊಳ್ಳಲಿದ್ದು, ಉತ್ತರಾಖಂಡ ಸರಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್-19 ನಿಂದಾಗಿ ಕಳೆದ ಎರಡು ವರ್ಷ ಈ ಯಾತ್ರೆ ಕೈಗೊಂಡ ಭಕ್ತರ ಸಂಖ್ಯೆ ಕಡಿಮೆಯಿತ್ತು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ.ಹಿಮಪಾತದ ಕಾರಣದಿಂದ ಕಳೆದ ನವೆಂಬರ್‌ನಲ್ಲಿ ಮುಚ್ಚಲ್ಪಟ್ಟಿರುವ ಗಂಗೋತ್ರಿ ಮತ್ತು ಯಮುನೋತ್ರಿ ದೇಗುಲದ ಬಾಗಿಲನ್ನು ಮೇ 3 ರಂದು ತೆರೆಯಲಾಗುತ್ತದೆ. ಕೇದರನಾಥ ದೇಗುಲದ ಬಾಗಿಲನ್ನು ಮೇ 6 ರಂದು ತೆರೆದರೆ, ಬದ್ರಿನಾಥ ದೇಗುಲ ಮೇ 8ರಂದು ಮತ್ತು ಹೇಮಕುಂಡ ಬಾಗಿಲನ್ನು ಮೇ 22 ರಂದು ತೆರೆಯಲಾಗುತ್ತದೆ.