ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮುಟ್ಟಿದ್ರೆ ಕಣ್ಣಲೂ, ಕೈ ಯಲ್ಲೂ ಉರಿ ಶುರುವಾಗಿದೆ. ಮೆಣಸಿನಕಾಯಿ ಮುಂದೆ ನಿಂತ್ರೆ ಕರದ ಘಾಂಟು ಬಾಯಲಿ ಹಿಡದಂತೆ ಟೆನ್ಷನ್ ಕೊಡ್ತಿದೆ.ಅಂದಹಾಗೆ ಮೆಣಸಿನಕಾಯಿ ಬೆಲೆ ಏಕಾಏಕಿ ದುಬಾರಿಯಾಗೋಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗೃಹಿಣಿಯರು ಈಗ ಅಡುಗೆ ಮಾಡಬೇಕಾದ್ರು ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕೇಳಿದ್ರೆ ಕಣ್ಣಲು ,ಬಾಯಲ್ಲೂ ಉರಿ ಶುರುವಾಗ್ತಿದೆ. ಮೊದಲೆಲ್ಲ ಕಡಿಮೆ ಬೆಲೆಗೆ ಸಿಗುತ್ತಿದ್ದ ಮೆಣಸಿನಕಾಯಿ ಈಗ ಕೈಗೆ ಎಟ್ಟುಕದ ಮಟ್ಟಿಗೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಇತ್ತಾ ಮನೆಯಲ್ಲಿ ಅಡುಗೆ ಮಾಡಬೇಕಾದ್ರೆ ಮೆಣಸಿನಕಾಯಿ ಇರಲ್ಲೇಬೇಕು.ಮೆಣಸಿನಕಾಯಿ ಇಲ್ಲಂದ್ರೆ ಯಾವ ಅಡಿಗೆನ್ನು ಪೂರ್ಣವಾಗುವುದಿಲ್ಲ.ಆದ್ರೆ ಈಗ ಮೆಣಸಿನಕಾಯಿ ತೆಗೆದುಕೊಳ್ಳುವುದಕ್ಕೂ ಹಿಂದೆ- ಮುಂದೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾನುವಾರದ ಸಮಯದಲ್ಲಿ ಬಿರಿಯಾನಿಗೆ ಮೆಣಸಿನಕಾಯಿಬೇಕು.ರೈಸ್ ಬಾತ್ ಮಾಡುವುದಕ್ಕೂ ಮೆಣಸಿನಕಾಯಿಬೇಕು.ನಿತ್ಯ ಉಪಿಟ್ಟು ,ಅವಲಕ್ಕಿ ತಿಂಡಿ ಮಾಡಬೇಕಾದ್ರು ಮೆಣಸಿನಕಾಯಿ ಬೇಕೇಬೇಕು.ಆದ್ರೆ ಈಗ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಪೂರೈಕೆ ಕಡಿಮೆಯಾಗಿದೆ. ಅಕಾಲಿಕ ಮಳೆಯಿಂದ ಮೆಣಸಿನಕಾಯಿ ಕೊಳೆತುಹೋಗಿದ್ದು,ಈಗ ರೈತರು ಕೂಡ ಮೆಣಸಿನಕಾಯಿ ಬೆಳೆಯುತ್ತಿಲ್ಲ.ಹೀಗಾಗಿ ಮೆಣಸಿನಕಾಯಿ ಬೆಲೆ ದುಬಾರಿಯಾಗಿದೆ. ಮೆಣಸಿನಕಾಯಿ ಕೆಜಿಗೆ 150-160 ಯಷ್ಟು ದುಪ್ಪಾಟಗಿದೆ. ನಾಲ್ಕೈದು ಪಟ್ಟು ಮೆಣಸಿನಕಾಯಿದರ ಹೆಚ್ಚಾಗಿದ್ದು ಗ್ರಾಹಕರ ಜೇಬು ಸುಡುತ್ತಿದೆ.ಗೃಹಿಣಿಯರು ಬೆಲೆ ಏರಿಕೆಯಿಂದ ಅಡುಗೆಗೆ ಮೆಣಸಿನಕಾಯಿ ಹಾಕೋಣ ಬೇಡ್ವಾ ಎಂದು ಯೋಚಿಸುತ್ತಿದ್ರೆ ಇತ್ತ ಮಾರುಕಟ್ಟೆಯಲ್ಲಿಯೂ ವ್ಯಾಪಾರಸ್ಥರು ಮೆಣಸಿನಬೆಲೆ ಏರಿಕೆಯಿಂದ ವ್ಯಾಪಾರ ಇಲ್ಲ ಅಂತಾ ಬೇರೆ ಬೇರೆ ಭಾಗಗಳಿಂದ ಮೆಣಸಿನಕಾಯಿ ಬರುತ್ತಿದೆ.ಆದರ ಬೆಲೆಯೂ ಕೈಗೆಟ್ಟಕದ ಮಟ್ಟದಲ್ಲಿ ದುಬಾರಿಯಾಗಿದೆ.