ಮಳೆಯಾಗದ ಹಿನ್ನಲೆಯಲ್ಲಿ ಕೆರೆಗಳು ಖಾಲಿ ಖಾಲಿಯಾಗಿದ್ದು, ಜನರು ಜೀವದ ಹಂಗು ತೊರೆದು ಜೀವಜಲಕ್ಕಾಗಿ ಹೋರಾಟ ನಡೆಸಿದ್ದಾರೆ.
ಬರಗಾಲದಲ್ಲಿ ನೀರಿಗಾಗಿ ಜನರು ಹಾಹಾಕಾರ ನಡೆಸಿದ್ದಾರೆ. ಬೀದರ್ ನ ಹೀರೆನಾಗಾಂವದಲ್ಲಿ ಬತ್ತಿದ ಕೆರೆ, ಕೊಳವೆ ಬಾವಿಗಳಿಂದಾಗಿ ನೀರಿಗಾಗಿ ಗ್ರಾಮಸ್ಥರ ಪರದಾಟ ಮುಂದುವರಿದಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಬಾವಿಗೆ ನೀರು ಬಿಡುತ್ತಿದ್ದಾರೆ ಗ್ರಾಮ ಪಂಚಾಯತ್ ನವರು.
44° ರಣ ಬಿಸಿಲಿನಲ್ಲಿ ಜೀವದ ಹಂಗು ತೊರೆದು ನೀರು ತುಂಬಲು ಮಹಿಳೆಯರು ಪರದಾಟ ನಡೆಸ್ತಿದ್ದಾರೆ.
ದಿನ ಒಂದಕ್ಕೆ ಬಾವಿಗೆ ಐದು ಟ್ಯಾಂಕರ್ ನೀರು ತುಂಬಿಸುತ್ತಿದ್ದಾರೆ ಪಂಚಾಯ್ತಿಯವರು. ಆದರೆ ಮೂರು ಸಾವಿರ ಜನಸಂಖ್ಯೆ ಹೊಂದಿದ ಗ್ರಾಮದ ಜನರಿಗೆ ನೀರು ಸಾಲುತ್ತಿಲ್ಲ ಎಂದು ಆರೋಪ ಕೇಳಿಬಂದಿದೆ. ತೆರೆದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಜನರು ಆಗ್ರಹ ಮಾಡಿದ್ದಾರೆ.