ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರ ತಪ್ಪಿದ್ದಲ್ಲ. ಇಂಥ ಪರಿಸ್ಥಿತಿಯಲ್ಲಿ ಹೆಸ್ಕಾಂ ಮಾಡಬಾರದ ಕೆಲಸ ಮಾಡಿ ಜನರಿಂದ ಉಗಿಸಿಕೊಂಡಿದೆ.
ಕುಡಿಯುವ ನೀರಿನ ಬೋರ್ವೆಲ್ ಸಂಪರ್ಕಿಸಿದ್ದ ಕರೆಂಟ್ ಕಟ್ ಮಾಡಿದ್ದಾರೆ ಹೆಸ್ಕಾಂ ಸಿಬ್ಬಂದಿ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿಯ ಕುಡಚಿ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಖಾಸಗಿ ಬೋರ್ವೆಲ್ ಗೆ ಸಂಪರ್ಕಿಸಿದ್ದ ಕರೆಂಟ್ ಕಟ್ ಮಾಡಿದ್ದಾರೆ. ಸಾದೀಕ ಫಿರ್ಜಾದೆ ಎಂಬುವವರಿಗೆ ಸೇರಿದ ಬೋರವೆಲ್ ಇದಾಗಿದೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಘಟನೆ ನಡೆದಿದೆ.
ಎಕಾಏಕಿ ಬೋರ್ವೆಲ್ ಕರೆಂಟ್ ಕಟ್ ಮಾಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಕಚೇರಿಗೆ ಘೇರಾವ್ ಹಾಕಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.