ಸಚಿವರಿಗೆ, ಶಾಸಕರಿಗೆ ದಿಗ್ಭಂಧನ ಹಾಕೋದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಈ ಊರಲ್ಲಿ ಜನರು ದೇವರಿಗೆ ದಿಗ್ಭಂಧನ ಹಾಕಿದ್ದಾರೆ.
ಮಳೆಗಾಗಿ ದೇವರಿಗೆ ಜಲ ದಿಗ್ಭಂಧನ ಹಾಕಿದ ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ದೇವರ ಗರ್ಭ ಗುಡಿಯೊಳಗೆ ನೀರು ಹಾಕಿ ದ್ವಾರ ಮುಚ್ಚಿದ್ದಾರೆ ಗ್ರಾಮಸ್ಥರು.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಅಪರೂಪದ ಘಟನೆ ನಡೆದಿದೆ.
ಎಂ ಕೆ ಹುಬ್ಬಳ್ಳಿ ಪಟ್ಟಣದಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೂರ್ಯನಾರಾಯಣ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಸೂರ್ಯ ನಾರಾಯಣ ದೇವಸ್ಥಾನದಲ್ಲಿ ನೀರು ತುಂಬಿಸಿ ಬಾಗಿಲು ಹಾಕಿದ್ದಾರೆ ಗ್ರಾಮಸ್ಥರು. ತೀವ್ರ ಬರಗಾಲ ಹಿನ್ನೆಲೆ ಮಳೆಯಾಗದೇ ಇದ್ದುದರಿಂದ ಈ ರೀತಿ ದೇವಸ್ಥಾನದಲ್ಲಿ ನೀರು ತುಂಬಿಸಿದರೆ ಮಳೆಯಾಗುತ್ತೆ ಎಂಬ ನಂಬಿಕೆ ಜನರಲ್ಲಿದೆ.
ಮೊದಲಿಂದಲು ನಡೆದುಕೊಂಡು ಬಂದ ಹಳೆ ಸಂಪ್ರದಾಯ ಇದಾಗಿದೆ. ದೇವಸ್ಥಾನದ ಗರ್ಭಗುಡಿಗೆ ನೀರು ತುಂಬಿ ದೇವರಿಗೆ ಮಳೆಗಾಗಿ ಪ್ರಾರ್ಥಿಸಿದ್ದಾರೆ ಗ್ರಾಮಸ್ಥರು. ಈ ಹಿಂದೆ ಕೂಡ ಮಳೆಯಾಗದೇ ಇದ್ದಾಗ ದೇವಸ್ಥಾನದಲ್ಲಿ ನೀರು ತುಂಬಿಸಿದ್ದರು ಗ್ರಾಮಸ್ಥರು. ನಂತರ ಉತ್ತಮ ಮಳೆಯಾಯಾಗಿದ್ದ ಇತಿಹಾಸವಿದೆ ಎನ್ನುತ್ತಾರೆ ಜನರು. ಗರ್ಭ ಗುಡಿಯಲ್ಲಿ ನೀರಲ್ಲಿ ಮುಳಗಿದ್ದಾನೆ ಸೂರ್ಯ ನಾರಾಯಣ.