Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನ ಜನರೇ ಎಚ್ಚರ! ಎಲ್ಲೆಂದರಲ್ಲಿ ಕಸ ಎಸೆದರೆ 500 ದಂಡ

ಬೆಂಗಳೂರಿನ ಜನರೇ ಎಚ್ಚರ! ಎಲ್ಲೆಂದರಲ್ಲಿ ಕಸ ಎಸೆದರೆ  500 ದಂಡ
ಬೆಂಗಳೂರು , ಶನಿವಾರ, 3 ನವೆಂಬರ್ 2018 (14:44 IST)
ಬೆಂಗಳೂರು : ಬೆಂಗಳೂರಿನಲ್ಲಿ  ಜನರು ಎಲ್ಲೆಂದರಲ್ಲಿ ಕಸವನ್ನು ಎಸೆದು ಇಡೀ ಸಿಟಿಯನ್ನು ಹಾಳುಮಾಡುತ್ತಿರುವ ಕಾರಣ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.


ಹೌದು. ಬೆಂಗಳೂರಿನ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಕಂಡ ಕಂಡಲ್ಲಿ ಕಸ ಎಸೆದರೆ ಅಂತವರಿಗೆ 500 ದಂಡ ವಿಧಿಸಲಿದೆ.


ಈ ಸಂಬಂಧ ಬಿಬಿಎಂಪಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು,’ ಕೆಲವರು ಕಂಡ ಕಂಡಲ್ಲಿ ಕಸ ಎಸೆಯುತ್ತಿರುವುದರಿಂದ ಕಸದ ಬ್ಲಾಕ್ ಸ್ಪಾಟ್ ಗಳು ತಲೆ ಎತ್ತುತ್ತಿದೆ.ಇದನ್ನು ತಡೆಯಲು ಹೆಚ್ಚಿನ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಈಗಿರುವ 100 ರೂ ದಂಡವನ್ನು500 ರೂಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ’ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆರತಿ ತಟ್ಟೆಗೆ ಹಣ ಹಾಕಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರು