Publish Date: Wed, 06 Feb 2019 (15:12 IST)
Updated Date: Wed, 06 Feb 2019 (15:14 IST)
ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಸ್ಥಳೀಯರು ಚಳಿ ಬಿಡಿಸಿದ ಘಟನೆ ನಡೆದಿದೆ.
ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರದ ಮೂಲಕ ಕಾರ್ಯಾಚರಣೆಗೆ ಇಳಿದಿದ್ದ ಪುರಸಭೆ ಅಧಿಕಾರಿಗಳಿಗೆ ಸ್ಥಳೀಯರು ಚಳಿ ಬಿಡಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಲಕ್ಷ್ಮಿ ಕಾಂಪ್ಲೆಕ್ಸ್ ಹಿಂಭಾಗದ ಕಾಂಪೌಂಡ್ ತೆರವಿಗೆ ಪುರಸಭೆ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಸ್ಥಳೀಯರು ಜಮಾಯಿಸಿ, ನೋಟಿಸ್ ನೀಡದೆ ತೆರವಿಗೆ ಮುಂದಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಏಕ ವಚನದಲ್ಲೆ ತರಾಟೆಗೆ ತೆಗೆದುಕೊಂಡರು. ಜಾಗದ ದಾಖಲಾತಿಗಖನ್ನು ತೋರಿಸುತ್ತಿದಂತೆ ತಬ್ಬಿಬ್ಬಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇನ್ನೂ ನೆಲಮಂಗಲ ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
Jagadeesh
Publish Date: Wed, 06 Feb 2019 (15:12 IST)
Updated Date: Wed, 06 Feb 2019 (15:14 IST)