Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದ್ದೇ ತಡ, ಜನ ರಸ್ತೆಗಿಳಿಯಲು ಪ್ರಾರಂಭಿಸಿದ್ದಾರೆ.
ಈಗ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಿದ್ದರೂ ಕಳೆದ ಕೆಲವು ದಿನಗಳಿಂದ ಮನೆಯೊಳಗೇ ಕೂತು ಬೇಸತ್ತಿರುವ ಜನ ಅನ್ ಲಾಕ್ ಎಂಬ ಸುದ್ದಿ ಕೇಳಿಯೇ ಗುಂಪು ಗುಂಪಾಗಿ, ವಾಹನಗಳ ಸಮೇತ ಬೀದಿಗಿಳಿದಿದ್ದಾರೆ. ಬೆಂಗಳೂರಿನ ಹಲವೆಡೆ ಈಗಲೇ ಟ್ರಾಫಿಕ್ ಜಾಮ್ ಆಗುತ್ತಿದೆ.
ಈಗಲೇ ಹೀಗಾದರೆ, ಅನ್ ಲಾಕ್ ಆದ ಮೇಲೆ ಜನ ಯಾವ ರೀತಿ ನಡೆದುಕೊಳ್ಳಬಹುದು ಎಂದು ಊಹಿಸಿಕೊಳ್ಳಿ. ಈ ರೀತಿಯಾದರೆ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಿ ಮತ್ತೆ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಅನ್ ಲಾಕ್ ಆದರೂ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿ ನಿಮ್ಮ ಎಚ್ಚರದಲ್ಲಿ ನೀವಿರುವುದು ಉತ್ತಮ.