Publish Date: Wed, 10 May 2023 (17:50 IST)
Updated Date: Wed, 10 May 2023 (16:38 IST)
ಮಹದೇವಪುರ ಕ್ಷೇತ್ರದ ಜ್ಯೋತಿ ಪುರ ಗ್ರಾಮದ ಮತಗಟ್ಟೆ ಸಂಖ್ಯೆ 3ರಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ.ಅರ್ಧಗಂಟೆಗೂ ಹೆಚ್ಚು ಕಾಲ ಜನರು ಪರದಾಟ ನಡೆಸಿದ್ದಾರೆ. 150ಕ್ಕೂ ಹೆಚ್ಚು ಮತದಾರರು ಸರದಿ ಸಾಲಿನಲ್ಲಿ ನಿಂತು ಮತಯಂತ್ರ ದೋಷದಿಂದ ಪರದಾಟ ನಡೆಸಿದ್ದಾರೆ.ಚುನಾವಣಾ ಅಧಿಕಾರಗಳ ನಿರ್ಲಕ್ಷ್ಯಕ್ಕೆ ಜನರು ಬೇಸೆತ್ತಿದ್ದಾರೆ.ಬಿಸಿಲಿನಲ್ಲಿ ಮತದಾರರು ಕಾಯುತ್ತಿದ್ದು,ಮತದಾರರಿಗೆ ಮಾಹಿತಿ ನೀಡದೇ ಅಧಿಕಾರಿಗಳು ಸುಮ್ಮನೆ ಕುಳಿತ್ತಿದ್ದು,ಮಹಿಳೆಯರು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ದಾರೆ.