Publish Date: Sun, 20 Oct 2019 (11:33 IST)
Updated Date: Sun, 20 Oct 2019 (11:35 IST)
ಬಾಗಲಕೋಟೆ : ಸಾವರ್ಕರ್ ಬಗ್ಗೆ ಸಿದ್ದರಾಮಯ್ಯನ ವಿವಾದಾತ್ಮಕ ಹೇಳಿಕೆ ವಿಚಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣದ ದೃಷ್ಟಿಯಿಂದ ಹೀಗೆ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪೇಜಾವರ ಶ್ರೀಗಳು, ಗಾಂಧಿ ಹತ್ಯೆಯಲ್ಲಿ ಆರ್ ಎಸ್ ಎಸ್ ಹಾಗೂ ಸಾವರ್ಕರ್ ಕೈವಾಡವಿದೆ ಎಂದು ಹೇಳುವುದು ಸರಿಯಲ್ಲ. ಸಾವರ್ಕರ್ ಅಪ್ರತಿಮ ದೇಶ ಭಕ್ತ. ಸಾವರ್ಕರ್ ವಿವಾದಿತ ವ್ಯಕ್ತಿಆಗಿದ್ದರೆ , ಗಾಂಧಿ ಹತ್ಯೆಯಲ್ಲಿ ಅವರ ಕೈವಾಡವಿದಿದ್ದರೆ ಕೋರ್ಟ್ ಅವರಿಗೆ ಶಿಕ್ಷೆ ನೀಡಬೇಕಿತ್ತು. ಆದರೆ ಕೋರ್ಟ್ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿದೆ ಎಂದು ಹೇಳಿದ್ದಾರೆ.
ಸಾವರ್ಕರ್ ಅವರಿಂದ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಬಂದಿತ್ತು. ಆದರೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಇಂತವರಿಗೆ ಗೌರವ ನೀಡುವ ಬದಲು ಟಿಪ್ಪು ಸಲ್ತಾನ್ ಗೆ ಗೌರವ ಕೊಡ್ತಾರೆ. ನಿಷ್ಪಕ್ಷಪಾತವಾಗಿ ಹೇಳ್ತಿನಿ ಸಾವರ್ಕರ್ ಅವರಿಗೆ ಅಗೌರವ ತೋರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.