ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಅದರಲ್ಲೂ ಸರಕಾರಿ ಕಛೇರಿ ಒಳಗೆ ಜನರು ಎಂಟ್ರೀ ಕೊಟ್ಟರೆ ಸಾಕು ಈ ಪುಣ್ಯಾತ್ಮನಿಗೆ ಹಬ್ಬವೋ ಹಬ್ಬದಂತೆ ಖುಷಿಯಾಗ್ತಾನೆ. ಯಾರು ಆತ ಗೊತ್ತಾ?
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಉಪ ತಶೀಲ್ದಾರ ಕಚೇರಿಯಲ್ಲಿ ಕಾಸ್ಟ್ ಮತ್ತು ಇನ್ ಕಮ್ ಪತ್ರ ತೆಗೆದುಕೊಳ್ಳಬೇಕಾದರೆ ಹಣ ನೀಡಬೇಕು. ರಾಜ್ಯ ಸರ್ಕಾರ ಬಡವರಿಗೆ ನೀಡಬೇಕಾದ ಸರ್ಕಾರದ ಆದೇಶ ಪ್ರಕಾರ ಯಾವುದೇ ಹಣ ಕೊಡುವಂತೆ ಇಲ್ಲ. ಉಚಿತವಾಗಿ ನೀಡಬೇಕಂತಾ ಇದೆ.
ಆದರೂ ಕಾಷ್ಟ ಮತ್ತು ಇನ್ ಕಮ್ ನೀಡಬೇಕಾದರೆ ಅಲ್ಲಿಯ ಸರ್ಕಾರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಇರುವ ಕುಮಾರ ಕಾಂಬಳೆ ಎಂಬಾತನ ಮೂಲಕ ಉಪ ತಹಶೀಲ್ದಾರ ಕಛೇರಿಯಲ್ಲಿ ಸಾರ್ವಜನಿಕರು, ಬಡ ಜನತೆಯಿಂದ ಗರಿ ಗರಿ ನೋಟು ಎಣಿಸಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಸಾಮಾಜಿಕ ತಾಲತಾಣಗಳಲ್ಲಿ ವಿಡಿಯೋ ದೃಶ್ಯ ಹರಿದಾಡಲಾರಂಭಿಸಿದೆ. ಅಷ್ಟೇ ಅಲ್ಲದೆ ಕಮಾರ ಕಾಂಬಳೆ ಮೂಲಕ ಹಣ ಯಾರಿಗೆ ತಲಪುತ್ತದೆ ಎನ್ನುವ ಅನುಮಾನ ಆ ಭಾಗದ ಜನರನ್ನ ಕಾಡಲು ಶುರು ಮಾಡಿದೆ.