ರೋಗಿಯೊಬ್ಬನನ್ನು ಆಂಬುಲೆನ್ಸ್ ಸಿಗದೇ ಗೂಡ್ಸ್ ಆಟೋದಲ್ಲಿ ಸಾಗಿಸಿರುವ ಅಮಾನವೀಯ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ರೈತನೊಬ್ಬ ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ. ಆತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲು 108 ಆಂಬುಲೆನ್ಸ್ ಗೆ ಫೋನ್ ಮಾಡಿದ್ರೆ ಮದ್ದೂರಿನಿಂದ 15 ಕಿಲೋ ಮೀಟರ್ ಇರುವ ಮಂಡ್ಯ ಗೆ ಕರೆತರಲು ಆಂಬುಲೆನ್ಸ್ ಚಾಲಕ ಒಂದೂವರೆ ಸಾವಿರ ಹಣ ಕೇಳಿದ್ದಾನೆ.
ಬಡ ರೈತ ಕುಟುಂಬ ಅಷ್ಟು ಹಣ ಕೊಡಲಾಗದೇ ಕೇವಲ 200 ರೂ. ಕೊಟ್ಟು ಗೂಡ್ಸ್ ಆಟೋ ಮೂಲಕ ಮಂಡ್ಯಕ್ಕೆ ಗಾಯಾಳುವನ್ನು ಕರೆತಂದಿದ್ದಾರೆ. ಇನ್ನು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ನಡೆದರೂ ಆಂಬುಲೆನ್ಸ್ ಬಾರದ ಕಾರಣ ಎತ್ತಿನ ಗಾಡಿಯಲ್ಲಿ ಗಾಯಾಳುಗಳನ್ನು ಸಾಗಿಸಿದ ಘಟನೆ ಸಹ ನಡೆದಿವೆ. ಉಚಿತ ಆಂಬುಲೆನ್ಸ್ ಸೇವೆ ಎಂದು ಆರೋಗ್ಯ ಇಲಾಖೆ ಹೇಳಿದ್ರು ಕೂಡ ಆಂಬುಲೆನ್ಸ್ ಬರಬೇಕೆಂದ್ರೆ ಹಣ ಕೊಡಲೇಬೇಕಿದೆ.