Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮತ ಎಣಿಕೆ ನಡೆಯಲಿದೆ, ನಾಳೆ ಈ ರೋಡ್ ನಲ್ಲಿ ಸಂಚರಿಸಬೇಡಿ

Bengaluru traffic

Krishnaveni K

ಬೆಂಗಳೂರು , ಸೋಮವಾರ, 3 ಜೂನ್ 2024 (09:53 IST)
ಬೆಂಗಳೂರು: ದೇಶವೇ ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆ 2024 ರ ಫಲಿತಾಂಶ ನಾಳೆ ಬರಲಿದ್ದು, ಮತ ಎಣಿಕೆ ದಿನ ಬೆಂಗಳೂರಿನಲ್ಲಿ ಕೆಲವೆಡೆ ಸಂಚಾರ ನಿಷೇಧ ಮಾಡಲಾಗಿದೆ. ಯಾವ ರಸ್ತೆಯಲ್ಲಿ ಸಂಚಾರ ನಿಷೇಧವಾಗಲಿದೆ ಇಲ್ಲಿದೆ ಡೀಟೈಲ್ಸ್.

ಬೆಂಗಳೂರಿನ ಮೂರು ಕಡೆ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂಗಳಿವೆ. ಬೆಂಗಳೂರು ಕೇಂದ್ರ ಕ್ಷೇತ್ರದ ಸ್ಟ್ರಾಂಗ್ ರೂಂ ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆಯಲ್ಲಿ, ಉತ್ತರ ಕ್ಷೇತ್ರದ ಮತಎಣಿಕೆ ಕೇಂದ್ರ ಸೇಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆಯಲ್ಲಿದೆ. ಬೆಂಗಳೂರು ದಕ್ಷಿಣ ಕೇಂದ್ರದ ಮತ ಎಣಿಕೆ ಕೇಂದ್ರ ಎಸ್ಎಸ್ ಎಂಆರ್ ವಿ ಕಾಲೇಜು ಜಯನಗರದಲ್ಲಿದೆ.

ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧದ ಕುರಿತಂತೆ ಸಂಚಾರಿ ಪೊಲೀಸರು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ. ಅದರಂತೆ ನಾಳೆ ಆರ್ ಆರ್ ಎಂಆರ್ ರಸ್ತೆ-ರಿಚ್ಮಂಡ್  ವೃತ್ತದಿಂದ ಹಡ್ಸನ್ ಜಂಕ್ಷನ್ ವರೆಗೆ, ವಿಠಲ್ ಮಲ್ಯ ರಸ್ತೆಯಿಂದ ಸಿದ್ಧಲಿಂಗಯ್ಯ ವೃತ್ತದವರೆಗೆ, ಎನ್ಆರ್ ರಸ್ತೆ-ಹಡ್ಸನ್ ವೃತ್ತದಿಂದ ಟೌನ್ ಹಾಲ್ ಜಂಕ್ಷನ್ ಕೆಬಿ ರಸ್ತೆ-ಎಚ್ಎಲ್ ಡಿ ಜಂಕ್ಷನ್ ನಿಂದ ಕ್ವೀನ್ ಜಂಕ್ಷನ್ ವರೆಗೆ, ಕೆಜಿ. ರಸ್ತೆ-ಪೊಲೀಸ್ ಕಾರ್ನರ್ ಜಂಕ್ಷನ್ ನಿಂದ ಮೈಸೂರ್ ಬ್ಯಾಂಕ್ ಜಂಕ್ಷನ್, ನೃಪತುಂಗ ರಸ್ತೆ- ಕೆಆರ್ ಜಂಕ್ಷನ್ ನಿಂದ ಪೊಲೀಸ್ ಕಾರ್ನರ್, ಕ್ವೀನ್ಸ್ ರಸ್ತೆ- ಬಾಳೇಕುಂದ್ರಿ ವೃತ್ತ, ಸೆಂಟ್ರಲ್ ಸ್ಟ್ರೀಟ್ ರಸ್ತೆ-ಬಿಆರ್ ವಿ ಜಂಕ್ಷನ್ ನಿಂದ ಅನಿಲ್ ಕುಂಬ್ಳೆ ವೃತ್ತ, ಎಂಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ಜಂಕ್ಷನ್ ವರೆಗೆ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ.

ಇದರ ಬದಲಾಗಿ ಸೇಂಟ್ ಜೋಸೆಫ್ ಕಾಲೇಜು ಮೈದಾನ, ಕಂಠೀರವ ಸ್ಟೇಡಿಯಂ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಎರಡು ದಿನದ ಮಳೆಯ ಅಬ್ಬರಕ್ಕೆ ಮರಗಳು ಧರೆಗೆ