Publish Date: Thu, 22 Dec 2022 (07:42 IST)
Updated Date: Thu, 22 Dec 2022 (10:20 IST)
ಬೆಳಗಾವಿ : ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರ್ಕಾರಕ್ಕೆ ಈಗ ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಬೇಡಿಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇಷ್ಟು ದಿನ ಪದೇ ಪದೇ ಡೆಡ್ಲೈನ್ ನೀಡುತ್ತಿದ್ದ ಪಂಚಮಸಾಲಿ ಸಮುದಾಯ ಈಗ ಮೀಸಲಾತಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ ಆರಂಭಿಸಿದೆ.
ಇಂದು ಬೆಳಗಾವಿಯಲ್ಲಿ ಬೃಹತ್ ಪಂಚಮಸಾಲಿ ಸಮಾವೇಶ ನಡೆಯಲಿದೆ. ಸಮುದಾಯಕ್ಕೆ 2ಎ ಮೀಸಲಾತಿ ನೀಡಿದರೆ ಸರ್ಕಾರಕ್ಕೆ ಸನ್ಮಾನ. ಇಲ್ಲದಿದ್ದರೆ ಅಪಮಾನ ಮಾಡುವುದು ಖಚಿತ. ಶಕ್ತಿ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಸಮುದಾಯದ ನಾಯಕರು ಗುಡುಗಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟ ಸಂಬಂಧ ಎಲ್ಲರ ಚಿತ್ತ ಸರ್ಕಾರದ ತೀರ್ಮಾನದತ್ತ ಇದೆ. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಂಪುಟ ಸಭೆ ನಡೆಯಲಿದೆ.
ramya kosira
Publish Date: Thu, 22 Dec 2022 (07:42 IST)
Updated Date: Thu, 22 Dec 2022 (10:20 IST)