Publish Date: Fri, 01 Mar 2019 (13:23 IST)
Updated Date: Fri, 01 Mar 2019 (13:35 IST)
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆ.26 ರಂದು ಪಾಕ್ ಮೇಲೆ ಪ್ರತಿದಾಳಿಯಾಗಿದೆ. ಪುಲ್ವಾಮಾ ದಾಳಿಗೆ ಭಾರತ ಸೇಡು ತೀರಿಸಿಕೊಂಡಿದೆ. ಮೋದಿ ಪ್ರಧಾನಿಯಾದ ಮೇಲೆ ವಿಶ್ವದಲ್ಲಿ ಭಾರತದ ಹೆಸರು ಪ್ರಸಿದ್ಧಿಯಾಗಿದೆ. ಪಾಕಿಸ್ತಾನದ ಝಂಗಾಬಲ ಅಡಗಿಹೋಗಿದೆ. ಹೀಗಂತ ಕೇಂದ್ರ ಸಚಿವೆ ಹೇಳಿದ್ದಾರೆ.
ಕೇಂದ್ರ ಸಚಿವೆ ಸುಷ್ಮಾಸ್ವರಾಜ್ ಈ ಹೇಳಿಕೆ ನೀಡಿದ್ದು, ಇದೇ ಮೊದಲ ಬಾರಿಗೆ ದೇಶದ ಸೈನಿಕರಿಗೆ ಕೇಂದ್ರ ಸರ್ಕಾರ ಸಹಕಾರ ನೀಡಿದ್ದರಿಂದ ಭಾರತೀಯ ಸೇನೆ ಉಗ್ರರ ಮೇಲೆ ದಾಳಿ ಮಾಡುವಂತಾಯಿತು. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಎಲ್ಲರು ದುಡಿಯಬೇಕಿದೆ ಎಂದಿದ್ದಾರೆ.
ಇಡೀ ವಿಶ್ವವೇ ಭಾರತದತ್ತ ಕೇಂದ್ರೀಕೃತಗೊಂಡಿದೆ. ಪೈಲೆಟ್ ಅಭಿನಂದನ್ ಅವರ ಸಾಹಸ ಎಲ್ಲರೂ ಮೆಚ್ಚಲೇಬೇಕು. ಪಾಕಿಸ್ತಾನ ವಿಶ್ವದಲ್ಲಿ ಒಂಟಿಯಾಗಿದೆ ಎಂದು ಸಚಿವೆ ಹೇಳಿದ್ದಾರೆ.