Select Your Language

Notifications

webdunia
webdunia
webdunia
webdunia

ಪಾಕ್ ಉಗ್ರಸ್ಥಾನ ಧ್ವಂಸ; ರಾಹುಲ್ ಗೆ ಅಭಿನಂದಿಸಿದ ಸಚಿವ!

ಪಾಕ್
ಗಡಿದಾಟಿ ಪಾಕಿಸ್ತಾನದ ಉಗ್ರರ ಸಂಹಾರ ಮಾಡಿದ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸಿರುವ ಸಚಿವರೊಬ್ಬರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ರಾಹುಲ್ ಗಾಂಧಿಗೆ ಸಚಿವ ರಾಜಶೇಖರ ಪಾಟೀಲ್ ಅಭಿನಂದನೆ ಸಲ್ಲಿಸಿದ್ದಾರೆ. ಯಾದಗಿರಿಯ ಪಗಲಾಪುರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಹೇಳಿಕೆ ನೀಡಿದ್ದು, ದೇಶದ ಭದ್ರತೆಯಲ್ಲಿ ಎಲ್ಲರೂ ಒಗ್ಗಾಟಾಗಿದ್ದೇವೆ.

ಇದರಲ್ಲಿ ರಾಜಕೀಯ ಮಾಡಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಏನೇ ನಿರ್ಧಾರ ತಗೆದುಕೊಂಡ್ರು ಈಗಾಗಲೇ ನಮ್ಮ ನಾಯಕ ರಾಹುಲ್ ಗಾಂಧಿ ಅವರಿಗೆ ಬೆಂಬಲ ನೀಡಿದ್ದಾರೆ ಎಂದರು.

ನಾನು ಈ ಸಮಯದಲ್ಲಿ ನಮ್ಮ ನಾಯಕ ರಾಹುಲ್ ಗಾಂಧಿ, ಭಾರತೀಯ ವಾಯು ಸೇನೆಗೆ ಮತ್ತು ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದಳಿಗೆ ಎಂಥಾ ಗತಿ ಬಂತು? ಶಾಕಿಂಗ್!