Publish Date: Sat, 04 Mar 2023 (09:13 IST)
Updated Date: Sat, 04 Mar 2023 (09:59 IST)
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೊಂದು ಬರ್ಬರ ಕೊಲೆಯಾಗಿದೆ. ವರ್ಷಗಳಿಂದ ಪ್ರೀತಿಸ್ತಿದ್ದ ಪ್ರಿಯತಮೆಯನ್ನೇ ಪಾಗಲ್ ಪ್ರೇಮಿಯೊಬ್ಬ 16 ಬಾರಿ ಚುಚ್ಚಿ ಚುಚ್ಚಿ ಕೊಲೆ ಮಾಡಿರೋ ಘಟನೆ ಮುರಗೇಶ್ ಪಾಳ್ಯದ ಎನ್ಎಎಲ್ ರಸ್ತೆಯಲ್ಲಿ ನಡೆದಿದೆ.
ಮೃತಳನ್ನು ಲೀಲಾ ಪವಿತ್ರಾ (26) ಎಂದು ಗುರುತಿಸಲಾಗಿದ್ದು, ಈಕೆಯನ್ನು ಪಾಗಲ್ ಪ್ರೇಮಿ ದಿನಕರ್ ಬನ್ನಾಳ ಕೊಲೆ ಮಾಡಿದ್ದಾನೆ. ಆಂಧ್ರಪ್ರದೇಶ ಮೂಲದ ಲೀಲಾ ಪವಿತ್ರಾ, ಒಮೆಗಾ ಎನ್ನುವ ಮೆಡಿಸನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಲೀಲಾ ಪವಿತ್ರಾ ಹಾಗೂ ದಿನಕರ್ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ರು. ಆದರೆ ಇತ್ತೀಚೆಗೆ ಲೀಲಾ, ದಿನಕರ್ನನ್ನು ಅವಾಯ್ಡ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕೆಲಸ ಮುಗಿಸಿ ಲೀಲಾಳನ್ನು ಹತ್ಯೆಗೈದಿದ್ದಾನೆ.
ವಿವಾಹಕ್ಕೆ ಒಪ್ಪದ್ದಕ್ಕೆ ಮಟಾಶ್: ಲೀಲಾ ಕೆಲಸ ಮುಗಿಸಿ ಹೊರಗಡೆ ಬರೋದನ್ನೇ ಕಾಯ್ತಿದ್ದ ದಿನಕರ್, ಮಾತನಾಡಿಸುವ ನೆಪದಲ್ಲಿ ಆಕೆಯ ಎದೆ, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾನೆ.