ಬೆಂಗಳೂರು: ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ವಿಧಿಸಿ ರಾಜ್ಯ ಸರ್ಕಾರ ಪ್ಯಾಕೇಜ್ ಭರವಸೆಯನ್ನೇನೋ ಕೊಡುತ್ತಿದೆ. ಆದರೆ ಈ ಪ್ಯಾಕೇಜ್ ಗಳು ಮಧ್ಯಮ ವರ್ಗದವರನ್ನು ತಲುಪುತ್ತಿಲ್ಲ ಎನ್ನುವುದು ವಿಪರ್ಯಾಸ.
ಅತ್ತ ಬಿಪಿಎಲ್ ಕಾರ್ಡ್ ಇಲ್ಲ, ಇತ್ತ ತೀರಾ ಬಡವರೂ ಅಲ್ಲ ಎನ್ನುವಂತಹ ಮಧ್ಯಮ ವರ್ಗದವರಿಗೆ ಯಾವ ಪರಿಹಾರವೂ ಸಿಗುತ್ತಿಲ್ಲ. ಕೊರೋನಾ, ಲಾಕ್ ಡೌನ್ ನಿಂದಾಗಿ ಅವರ ಆದಾಯಕ್ಕೂ ಪೆಟ್ಟು ಬಿದ್ದಿದೆ. ಆದರೆ ಸರ್ಕಾರದಿಂದ ಈ ವರ್ಗದವರಿಗೆ ನೆರವು ಸಿಗುತ್ತಿಲ್ಲ.
ಖಾಸಗಿ ಕಂಪನಿಗಳಲ್ಲಿ ಸಾಧಾರಣ ವೇತನ ಪಡೆದು ದುಡಿಯತ್ತಿರುವ ವರ್ಗದವರಿಗೆ ಈಗ ಒಂದು ತಿಂಗಳಿಂದ ಲಾಕ್ ಡೌನ್ ಆಗಿ ಸಂಬಳವೂ ಬಂದಿಲ್ಲ, ಅತ್ತ ಉಳಿತಾಯದ ಹಣವೂ ಹೆಚ್ಚಿಲ್ಲ ಎನ್ನುವ ಪರಿಸ್ಥಿತಿ. ಅದರ ಜೊತೆಗೆ ಖಾಯಿಲೆ,ಕಸಾಲೆ ಬಂದು ಹೆಚ್ಚುವರಿ ಖರ್ಚಾದರೆ ದೇವರೇ ಗತಿ. ಇಂತಹವರಿಗೂ ನೆರವಾಗುವಂತಹ ಯೋಜನೆಯನ್ನು ಸರ್ಕಾರ ಮಾಡಿದರೆ ಪರಿಹಾರ ಪ್ಯಾಕೇಜ್ ಎನ್ನುವುದಕ್ಕೆ ನಿಜವಾದ ಅರ್ಥ ಸಿಗಬಹುದು.