ಸಿರಿಧಾನ್ಯ ಸಂಸ್ಕೃತಿಯ ಮಹತ್ವ ಮತ್ತು ಆಹಾರದಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಹಾಗೂ ನಿರ್ಲಕ್ಷ್ಯಕ್ಕೊಳಗಾಗಿರುವ ಸಿರಿಧಾನ್ಯ ಕೃಷಿಗೆ ಪುನರುಜ್ಜೀವನ ಕೈಗೊಳ್ಳಲು ಸಿರಿಧಾನ್ಯ ಮೇಳಗಳನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಮಿಲ್ಲೆಟ್ ಹೌಸ್ ಭಾಗವಹಿಸುತ್ತಿರುವುದು ವಿಶೇಷ. ಕರ್ನಾಟಕದ ಒಂದು ಸಾಧಾರಣ ಹಳ್ಳಿಯಲ್ಲಿ 8 ವರ್ಷಗಳ ಹಿಂದೆ ಆರಂಭವಾದ "ಮಿಲೆಟ್ ಹೌಸ್ ಸಂಸ್ಥೆ ಇಂದು ನೂರಾರು ಜನರಿಗೆ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ನೀಡಿ, ನಮ್ಮ ಕರುನಾಡಿನಾದ್ಯಂತ ಜನರಿಗೆ ಆರೋಗ್ಯ ನೀಡಿ, ನೂರಾರು ರೈತರಿಗೆ ಸಿರಿಧಾನ್ಯಗಳನ್ನು ಯಾವ ರೀತಿ ಸಾವಯವವಾಗಿ ಬೆಳೆಯಬೇಕೆಂದು ತರಬೇತಿ ನೀಡುತ್ತಾ, ರೈತರು ಬೆಳೆದ ಬೆಳೆಗಳನ್ನು ಒಳ್ಳೆಯ ಬೆಲೆ ನೀಡಿ ಖರೀದಿಸಿ "ಮಿಲೆಟ್ ಹೌಸ್ ಮಾಲ್ " ಉತ್ಪನ್ನವನ್ನು ತಯಾರಿ ಮಾಡುತ್ತಿದ್ದಾರೆ. ಈ ರೀತಿ ಗ್ರಾಮೀಣ ಕರ್ನಾಟಕ ದಲ್ಲಿ ಎಷ್ಟೋ ಜನರಿಗೆ ಉದ್ಯೋಗ ನೀಡುವಿಕೆ, ರೈತರಿಗೆ ತರಬೇತಿ ನೀಡಿ, ಬೆಂಬಲ ಬೆಲೆ ನೀಡಿ ಬೆಳೆಯನ್ನು ಖರೀದಿಸಿ ರೈತರಿಗೆ ಸಹಾಯ ಮಾಡುತ್ತ, ಕರುನಾಡಿನ ಜನರಿಗೆಲ್ಲ ಆರೋಗ್ಯ ದಾನ ಮಾಡುತ್ತಾ ಸಮಾಜ ಮುಖಿಯಾಗಿ ಮಿಲೆಟ್ ಹೌಸ್ ಸಂಸ್ಥೆ ಕೆಲಸ ಮಾಡಿ 2023 ಅಂತರ ರಾಷ್ಟ್ರೀಯ ಸಿರಿಧಾನ್ಯಗಳ ವರ್ಷಕ್ಕೆ ಕರ್ನಾಟಕ ತುಂಬಾ ಬಲಿಷ್ಠವಾಗಿ ಪ್ರತಿನಿಧಿಸಲು ತನ್ನದೇ ಆದ ಕಾಣಿಕೆಯನ್ನು ನೀಡಿದೆ ಎಂದು ಸಂಸ್ಥೆಯ ಎಂ.ಡಿ ಕಾರ್ತಿಕ್ ತಿಳಿಸಿದ್ರು.