Publish Date: Thu, 19 Jan 2023 (19:50 IST)
Updated Date: Thu, 19 Jan 2023 (19:57 IST)
ರಾಜ್ಯದ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ ಅಂತ ಹೇಳಿ ಸರ್ಕಾರದ ಹೆಸರು ಸಂಪೂರ್ಣ ಕೆಟ್ಟು ಹೋಗಿದೆ. ಕಾರಣದಿಂದ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಬರ್ತಾ ಇದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಮೋದಿ ಅವರು ಇನ್ನು ಮೇಲೆ ಪದೇ ಪದೇ ಬರ್ತಾರೆ ಎಂಬ ವಿಚಾರಕ್ಕೆ ಪ್ರಕ್ರಿಯಿಸಿದ ಅವರು ಮೋದಿ ಅವರು ಇನ್ನು ಮೇಲೆ ಪದೇ ಪದೇ ಬರ್ತಾರೆ, ಗೊತ್ತಿರುವ ವಿಚಾರ ಸರ್ಕಾರದ ಹೆಸರು ಸಂಪೂರ್ಣ ಕೆಟ್ಟು ಹೋಗಿದೆ. 4೦ % ಸರ್ಕಾರ ಅಂತ ಏಳು ಕೋಟಿ ರಾಜ್ಯದ ಜನರಿಗೆ ಗೊತ್ತಾಗಿದೆ. ಕಳೆದ ಮೂರು ವರ್ಷದಲ್ಲಿ ಅಭಿವೃದ್ಧಿ ಶೂನ್ಯ ಒಂದು ಮನೆ ಕಟ್ಟಿಲ್ಲ. 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದರಲ್ಲೂ ೪೦% ಕಮೀಷನ್ ಹೊಡೆತಾ ಇದಾರೆ. ಹಾಗಾಗಿ ಮೋದಿ ಹೆಸರು ಒಂದೇ ಉಳಿದಿರೋದು ಈ ಹಿನ್ನೆಲೆ ಮೋದಿ,ಶಾ,ನಡ್ಡಾ ಬರ್ತಾ ಇದ್ದಾರೆ. ಆದರೆ ರಾಜ್ಯದಲ್ಲಿ ಮೋದಿ ಮೋಡಿ ನಡೆಯಲ್ಲ ಇಲ್ಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.