ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಂದು ಪಕ್ಷಾತೀತವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿರುವ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕ ಸ್ಥಾಪನೆಗೆ ಸ್ಥಳೀಯವಾಗಿ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವಜನಿಕ ಅಹವಾಲು ಸಭೆ ಇಂದು ಏರ್ಪಡಿಸಿತ್ತು. ಆದರೆ 5 ಮತ್ತು 6 ನೇ ಘಟಕಕ್ಕೆ ವಿರೋಧಿಸುತ್ತಿರುವವರಲ್ಲಿ ಅನೇಕರು ಅಹವಾಲು ಸಭೆಗೆ ಹಾಜರಾಗದೇ ಮಲ್ಲಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಸಭೆ ಕೈಗಾ ಯೋಜನಾ ಪ್ರದೇಶದಲ್ಲಿ ಮಾಡದೇ ಸಾರ್ವಜನಿಕ ಪ್ರದೇಶದಲ್ಲಿ ಮಾಡಬೇಕು ಎಂದು ಆಗ್ರಹಿಸಿದರು. ಕೆಲವು ವಿರೋಧಿ ಹೋರಾಟಗಾರರು ಅಹವಾಲು ಸಭೆಗೆ ಹಾಜರಾಗಿ ತಮ್ಮ ವಿರೋಧ ವ್ಯಕ್ತಪಡಿಸಿದರು.