Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಸಹಕಾರಿಯಾಗುತ್ತಿಲ್ಲ ಎಂದ ಕೃಷಿ ಸಚಿವ!

ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಸಹಕಾರಿಯಾಗುತ್ತಿಲ್ಲ ಎಂದ ಕೃಷಿ ಸಚಿವ!
ದಾವಣಗೆರೆ , ಶನಿವಾರ, 15 ಡಿಸೆಂಬರ್ 2018 (17:37 IST)
ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ಹತ್ತಾರು ಗೊಂದಲಗಳಿವೆ. ರೈತಾಪಿ ಜನಕ್ಕೆ ಸೂಕ್ತ ರೀತಿಯಲ್ಲಿ ಸಹಕಾರಿ ಆಗುತ್ತಿಲ್ಲ ಎಂದು ಕೃಷಿ ಸಚಿವ ಹೇಳಿಕೆ ನೀಡಿದ್ದಾರೆ.

ರೈತಾಪಿ ಜನಕ್ಕೆ ಸೂಕ್ತವಾಗಿ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಸಹಕಾರಿಯಾಗುತ್ತಿಲ್ಲ ಎಂದು ಕೃಷಿ ಸಚಿವ   ಎನ್. ಎಚ್.ಶಿವಶಂಕರ ರೆಡ್ಡಿ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯಲ್ಲಿ ನಡೆದ ಕೃಷಿ ತಂತ್ರಜ್ಞರ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫಸಲ್ ಬಿಮಾ ಗೊಂದಲ ನಿವಾರಣೆಗೆ ಇಷ್ಟರಲ್ಲಿಯೇ ಕೇಂದ್ರದ ಕೃಷಿ ಸಚಿವರ ಜೊತೆ ಸಭೆ ನಡೆಸಲಾಗುವುದು ಎಂದರು.
2017 ಮತ್ತು 2018 ವರ್ಷದಲ್ಲಿ ರಾಜ್ಯದಿಂದ ಒಂದು ಸಾವಿರದಾ ಎರಡು ನೂರು ಕೋಟಿ ಹಣ ಫಸಲ್ ವಿಮಾ ಯೋಜನೆಗೆ ತುಂಬಲಾಗಿದೆ. ಆದರೆ ರೈತರಿಗೆ ಕೇವಲ 600 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ.

ಉಳಿದ 600 ಕೋಟಿ ರೂಪಾಯಿ ವಿಮಾ ಕಂಪನಿಗಳ ಪಾಲಾಗಿದೆ. ಮೇಲಾಗಿ ಸಕಾಲಕ್ಕೆ ಹಣ ಕೂಡಾ ಬಿಡುಗಡೆ ಮಾಡುತ್ತಿಲ್ಲ ಎಂದು ಸಚಿವ ಶಿವಶಂಕರರೆಡ್ಡಿ ಬೇಸರ ವ್ಯಕ್ತಪಡಿಸಿದರು. ಇನ್ನೂ ಸಂಸದ ಸಿದ್ದೇಶ್ವರ್ ಕೂಡ ಫಸಲು ಬಿಮಾ ಯೋಜನೆಯಲ್ಲಿ ಗೊಂದಲ ಇರುವುದು ನಿಜ, ಹಲವು ಜನಕ್ಕೆ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.



 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು – ಹೊನ್ನಾವರ ವಾಹನ ಸವಾರರಿಗೆ ಗುಡ್ ನ್ಯೂಸ್ ಏನು ಗೊತ್ತಾ?