Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವೈದ್ಯರ ನಿರ್ಲಕ್ಷ: ಕಾಂಗ್ರೆಸ್ ಮುಖಂಡನ ಸಾವು

ವೈದ್ಯರ ನಿರ್ಲಕ್ಷ: ಕಾಂಗ್ರೆಸ್ ಮುಖಂಡನ ಸಾವು
ಬೆಂಗಳೂರು , ಸೋಮವಾರ, 10 ಅಕ್ಟೋಬರ್ 2016 (16:07 IST)
ಆಪರೇಶನ್ ಮಾಡಿ ಗುಣವಾಗಿದ್ದಾರೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದ ಕೆಲವೇ ಗಂಟೆಗಳಲ್ಲಿ ಕೆಂಗೇರಿ ವಲಯ ಹಿಂದುಳಿದ ವರ್ಗದ ಕಾಂಗ್ರೆಸ್ ಅಧ್ಯಕ್ಷ ಸಾವನ್ನಪ್ಪಿರುವ ಘಟನೆ ರಾಜಧಾನಿಯಲ್ಲಿ ವರದಿಯಾಗಿದೆ. 
 
ಹೃದಯಘಾತಕ್ಕೆ ಒಳಗಾಗಿ ನಿನ್ನೆ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಹಿಂದುಳಿದ ವರ್ಗದ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ಅವರು ಆಪರೇಶನ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ್ದಾರೆ. 
 
ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷದಿಂದ ಹಿಂದುಳಿದ ವರ್ಗದ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿರುವ ಅವರ ಮನೆಯವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಂಗೇರಿ ಪೊಲೀಸ್ ಠಾಣೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು.
 
ಇನ್ನು ಬಿಜಿಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಆಪರೇಶನ್ ಮಾಡಲು 4 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಗಿ ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಐ ಲವ್ ಪಾಕಿಸ್ತಾನ್ ': ರಾಜಸ್ಥಾನದಲ್ಲಿ ಹಾರಾಡುತ್ತಿದೆ ಬಲೂನ್