ರಾಜಸ್ಥಾನದ ಸೂರತ್‌ಗಢ ಗ್ರಾಮದಲ್ಲಿ ಸೋಮವಾರ 'ಐ ಲವ್ ಪಾಕಿಸ್ತಾನ್ ' ಎಂದು ಬರೆದಿರುವ ಬಲೂನ್ ಒಂದು ಹಾರಾಡುತ್ತಿದ್ದು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಬಲೂನ್ ಮೇಲೆ 'ಐ ಲವ್ ಪಾಕಿಸ್ತಾನ್ ' ಎಂಬ ಸಂದೇಶವನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ.
ಈ ಪ್ರಸಂಗ ಉರ್ದು ಭಾಷೆಯಲ್ಲಿ ಬರೆಯಲಾದ ಸಂದೇಶವನ್ನು ಹೊಂದಿದ್ದ ಪಾಕಿಸ್ತಾನದಿಂದ ಹಾರಿ ಬಿಡಲಾದ ಮೂರು ಬಲೂನ್‌ಗಳು ಪಂಜಾಬ್‌ನ ಮೂರು ಗ್ರಾಮಗಳಲ್ಲಿ ಕಂಡು ಬಂದ ನೆನಪನ್ನು ಮರುಕಳಿಸಿದೆ.
ಜುಲೈ ತಿಂಗಳಲ್ಲಿ ಉಗ್ರ ದಾಳಿ ನಡೆದ ಗುರುದಾಸಪುರದ ದಿನಾನಗರದ ಘಿಸಾಲ್ ಗ್ರಾಮದಲ್ಲಿ ಹಳದಿ ಬಣ್ಣದ ಎರಡು ಬಲೂನ್‌ಗಳು ಪತ್ತೆಯಾಗಿದ್ದವು. ಅದರ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂದೇಶವಿತ್ತು. 'ಪ್ರಧಾನಿ ಮೋದಿ ಅವರೇ ಆಯೂಬಿಯ ಖಡ್ಗಗಳು ಇನ್ನು ನಮ್ಮ ಜತೆ ಇವೆ. ಇಸ್ಲಾಂ ಜಿಂದಾಬಾದ್', ಎಂದು ಬರೆಯಲಾಗಿತ್ತು.
ಮತ್ತೊಂದು ಬಲೂನ್ ಪಠಾಣ್‌ಕೋಟ್‌ನ ನರೋತ್ ಜೈಮಾಲ್ ಗ್ರಾಮದಲ್ಲಿ (ಗಡಿಯಲ್ಲಿ) ಪತ್ತೆಯಾಗಿತ್ತು. ಅದರಲ್ಲಿ 'ಭಾರತ ನಮ್ಮ ಜತೆ ಯುದ್ಧ ಮಾಡಲು ಸಾಧ್ಯವಿಲ್ಲ - ಪಾಕಿಸ್ತಾನಿ ನಾಗರಿಕರು', ಎಂದು ಬರೆಯಲಾಗಿತ್ತು.
ಮೂರನೆಯ ಬಲೂನ್ ಜಲಂಧರ್‌ನ ಕರ್ತಾರ್‌ಪುರದ ಅಲಿ ಖೇಲಾ ಗ್ರಾಮದಲ್ಲಿ ಕಂಡು ಬಂದಿದ್ದು, 'ಭಾರತದ ನಾಶ ಕಾಶ್ಮೀರಿಗಳ ಕೈಯ್ಯಲಿದೆ. ಮೋದಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಇನ್ಸಾ ಅಲ್ಲಾ', ಎಂದು ಬರೆದಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ