ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬುಧವಾರ ಪ್ರಮಾಣವಚನ ಹಿನ್ನಲೆ ಬೆಂಗಳೂರಿನ ಲಿ ಮೆರಿಡಿಯನ್ ಹೋಟೆಲ್‌ನಲ್ಲಿ ತಂಗಿದ್ದ ಜೆಡಿಎಸ್ ಶಾಸಕರು ದೇವನಹಳ್ಳಿ ಬಳಿಯ ರೆಸಾರ್ಟ್‌ಗೆ ಶೀಪ್ಟ್ ಹಾಗಿದ್ದಾರೆ.
ಅಂದ ಹಾಗೆ ಪ್ರಮಾಣ ವಚನದವರೆಗೂ ಜೆಡಿಎಸ್ ಶಾಸಕರನ್ನ ಕ್ಷೇತ್ರಗಳಿಗೆ ಕಳಿಸದೇ ಒಟ್ಟಾಗಿ ಶಾಸಕರು ಇರಲು ಚಿಂತಿಸಿದ್ದು ದೇವನಹಳ್ಳಿ ನಂದಿಬೆಟ್ಟ ರಸ್ತೆಯಲ್ಲಿರುವ ಪ್ರೆಸ್ಟಿಜ್ ಗಾಲ್ಪ್ ರೆಸಾರ್ಟ್‌ನಲ್ಲಿ 3೦ ರೂಮ್‌ಗಳನ್ನ ಬುಕ್ ಮಾಡಲಾಗಿದೆ.
ಈ ಹಿನ್ನಲೆಯಲ್ಲಿ ಕಳೆದ ರಾತ್ರಿ 32 ಜೆಡಿಎಸ್ ಶಾಸಕರು ರೆಸಾರ್ಟ್‌ಗೆ ಆಗಮಿಸಿದ್ದು ತಮ್ಮ ಕುಟುಂಬದ ಜೊತೆ ವಿಲ್ಲಾಗಳಲ್ಲಿ ತಂಗಿದ್ದಾರೆ. ಇನ್ನೂ ಎರಡು ಮೂರು ದಿನಗಳ ಕಾಲ ಇಲ್ಲೇ ಉಳಿಯಲಿದ್ದು ಜೆಡಿಎಸ್ ಶಾಸಕರು ತಮ್ಮ ಕುಟುಂಬದ ಜತೆ ಕಾಲ ಕಳೆಯಲಿದ್ದಾರೆ.
ಇನ್ನೂ ವಿಶ್ವಾಸಮತದವರೆಗೂ ಆಪರೇಷನ್ ಕಮಲದ ಭೀತಿಯಿಂದ ಪಾರಾಗಲು ಈ ರೀತಿಯ ಪ್ಲಾನ್ ಕುಮಾರಸ್ವಾಮಿಯವರು ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಇಂದು ಬೆಳಗ್ಗೆಯಿಂದಲೂ ರೆಸಾರ್ಟ್‌ಗೆ ತೆರಳುವ ಸಿಬ್ಬಂದಿಯನ್ನ ತಪಾಸಣೆ ಮಾಡುತ್ತಿರುವ ಪೊಲೀಸರು ಯಾರಿಗೂ ಒಳಗೆ ಪ್ರವೇಶವನ್ನ ಕಲ್ಪಿಸಿಕೊಟ್ಟಿಲ್ಲ.
ಜತೆಗೆ ಇಂದು ಬೆಳಗ್ಗೆ ೧೧ ಗಂಟೆ ನಂತರ ಹಾಸನದಿಂದ ಕುಮಾರಸ್ವಾಮಿಯವರು ರೆಸಾರ್ಟ್‌ಗೆ ಆಗಮಿಸುವ ನೀರಿಕ್ಷೆಯಿದ್ದು ಶಾಸಕರ ಜತೆ ಉಭಯ ಕುಶಲೋಪರಿ ನಡೆಸಿ ನಂತರ ಕೆಂಪೇಗೌಡ ವಿಮಾನ ನಿಲ್ದಾಣದ ಮೂಖಾಂತರ ದೆಹಲಿಗೆ ನಿಯೋಜಿತ ಸಿಎಂ ಹೆಚ್‌ಡಿಕೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.