ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ಪೂರ್ಣಗೊಳ್ಳುವ ಮೊದಲೇ ಮತ್ತೆ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರಾಜ್ಯದಲ್ಲಿ ಕಾಂಗ್ರೆಸ್ ನ ಅತೃಪ್ತರ ಆಟ ಮತ್ತೆ ಶುರುವಾಗುತ್ತಿರುವ ಲಕ್ಷಣಗಳು ಗೋಚರವಾಗಿವೆ. ಕೈ ಪಾಳೆಯದ ಶಾಸಕರನ್ನು ತನ್ನ ಕಡೆಗೆ ಸೆಳೆದು ಹಾಗೂ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಕಮಲ ಪಾಳೆಯ ತೆರೆಮರೆಯಲ್ಲಿ ಮತ್ತೆ ಭಾರಿ ಕಸರತ್ತು ನಡೆಸಲಾರಂಭಿಸಿದೆ.
ಹಿಂದೊಮ್ಮೆ ಎರಡು ಬಾರಿ ಮೈತ್ರಿ ಸರಕಾರವನ್ನು ಕೊನೆಗಾನಿಸಲು ಬಿಜೆಪಿ ಯತ್ನಿಸಿತ್ತು. ಈಗ ಮೂರನೇ ಬಾರಿ ಮತ್ತೆ ತನ್ನ ಪ್ರಯತ್ನ ಶುರುವಿಟ್ಟುಕೊಂಡು ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.