Publish Date: Mon, 22 Apr 2019 (15:26 IST)
Updated Date: Mon, 22 Apr 2019 (15:28 IST)
ಇದುವರೆಗೆ ಮ್ಯಾಚ್ ಫಿಕ್ಸಿಂಗ್ ನಲ್ಲಿ ಗೆಲ್ಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಹೀನಾಯವಾಗಿ ಸೋಲಲಿದ್ದಾರೆ. ಹೆಂಡ ಮತ್ತು ಹಣವನ್ನು ಹಂಚುವ ಕೆಲಸವನ್ನು ಖರ್ಗೆ ಹಾಗೂ ಅವರ ಮಗ ಪ್ರಿಯಾಂಕ ಖರ್ಗೆ ಮಾಡುತ್ತಿದ್ದಾರೆ. ಹೀಗಂತ ವಿಧಾನ ಪರಿಷತ್ ಸದಸ್ಯರೊಬ್ಬರು ಆರೋಪ ಮಾಡಿದ್ದಾರೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದು, ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ 1 ಲಕ್ಷ ಮತ ಅಂತರಗಳಲ್ಲಿ ಗೆಲ್ಲಲಿದ್ದಾರೆ ಎಂದರು.
ಇನ್ನು ಕಾಂಗ್ರೆಸ್ ನವರು ಕನಿಷ್ಟ 100 ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ ಎಂದು ದೂರಿದ್ರು. ಕೋಳಿ ಸಮಾಜ ಎಸ್ಟಿ ಸಮುದಾಯಕ್ಕೆ ಸೇರಿಸಲು ಭರವಸೆಯನ್ನ ನಾವು ನೀಡಿದ್ದೇವೆ. 2 ತಿಂಗಳಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಸೇರ್ಪಡೆ ಕೆಲಸ ಮಾಡಲಾಗುತ್ತದೆ ಎಂದರು.
ನನ್ನನ್ನ ಸೋಲಿಸೋಕೆ ಬಿಜೆಪಿ ಗಂಟು ತಿಂದಿದ್ದೇನಾ ಎಂದು ಖರ್ಗೆ ಹೇಳಿದ್ದಾರೆ. ಇದಕ್ಕೆ ಟಾಂಗ್ ನೀಡಿದ ರವಿಕುಮಾರ್, ಕಲಬುರಗಿ ಜನರ ಗಂಟನ್ನು ತಿಂದಿದ್ದಾರೆ. ಹೀಗಾಗಿ ಕಲಬುರಗಿ ಜನ ಖರ್ಗೆಗೆ ವಿಶ್ರಾಂತಿ ನೀಡಲು ತೀರ್ಮಾನಿಸಿದ್ದಾರೆ ಎಂದಿದ್ದಾರೆ. ಸೋಲಿನ ಭೀತಿಯಲ್ಲಿ ಖರ್ಗೆ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
Jagadeesh
Publish Date: Mon, 22 Apr 2019 (15:26 IST)
Updated Date: Mon, 22 Apr 2019 (15:28 IST)