Publish Date: Mon, 11 Feb 2019 (12:38 IST)
Updated Date: Mon, 11 Feb 2019 (12:40 IST)
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಮಾತನಾಡಿದ್ದು ನಾನೇ ಎಂದು ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡಿರುವ ಬೆನ್ನಲ್ಲೇ ಇದೀಗ ಆಪರೇಷನ್ ಕಮಲ ಮಾಡ್ತಿರೋದು ನಿಜ ಎಂದು ಶಾಸಕರೊಬ್ಬರು ಒಪ್ಪಿಕೊಂಡಿದ್ದಾರೆನ್ನಲಾಗುತ್ತಿದೆ.
ನಾವು ಕಾಂಗ್ರೆಸ್, ಜೆಡಿಎಸ್ ನಲ್ಲಿ ದೊಡ್ಡ ದೊಡ್ಡವರಿಗೆ ಕೈಹಾಕಿದ್ದೇವೆ. ಹೀಗಂತ ಬಿಜೆಪಿಯ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಶರಣಗೌಡ ಜತೆ ನಡೆಸಿರುವ ಸಂಭಾಷಣೆಯನ್ನು ತಿರುಚಿದ್ದಾರೆ ಎಂದು ಈಗಾಗಲೇ ಬಿ.ಎಸ್.ಯಡಿಯೂರಪ್ಪನವರು ಹೇಳಿದ್ದಾರೆ ಎಂದರು.
ಅವರು ನಮ್ಮ ಶಾಸಕರನ್ನು ಈ ಹಿಂದೆ ಚೆನ್ನೈ, ಗೋವಾಕ್ಕೆ ಕರೆದುಕೊಂಡು ಹೋಗಿರಲಿಲ್ವಾ? ಎಂದು ಕೇಳಿದ ಸಿ.ಟಿ.ರವಿ, ಕಾಂಗ್ರೆಸ್ – ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.