Publish Date: Tue, 20 Jun 2023 (11:25 IST)
Updated Date: Tue, 20 Jun 2023 (10:27 IST)
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ನಿಂತು ಮಾತನಾಡುವ ಧಮ್, ತಾಕತ್ತು ಇದ್ದಿದ್ದು ಯಡಿಯೂರಪ್ಪ ಅವರಿಗೆ ಮಾತ್ರ. ಉಳಿದವರೆಲ್ಲಾ ಶೂನ್ಯ ಎಂದು ಸಚಿವ ರಾಮಲಿಂಗಾ ರೆಡ್ಡಿ ಕುಟುಕಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಂಸತ್ತಿನಲ್ಲಿ ಯಾರಾದ್ರೂ ಕರ್ನಾಟಕದ ಬಗ್ಗೆ ಮಾತಾಡ್ತಾರಾ? 25 ಜನ ಸಂಸದರಿಗೆ ಮೋದಿ ಎದುರಿಗೆ ನಿಂತು ಮಾತನಾಡುವ ಧೈರ್ಯವಿಲ್ಲ. ಆ ಧೈರ್ಯ ಯಡಿಯೂರಪ್ಪ ಅವರಿಗೆ ಮಾತ್ರ ಇತ್ತು.
ಈಗ ದೆಹಲಿಗೆ ಹೋಗುವ ಎಂಪಿಗಳು ಸುಮ್ಮನೆ ಹೋಗ್ತಾರೆ. ತಿರುಪತಿಗೆ ಹೋಗಿ ವೆಂಕಟರಮಣಸ್ವಾಮಿಗೆ ನಮಸ್ಕಾರ ಹಾಕುವ ರೀತಿ, ದೆಹಲಿಗೆ ಹೋಗಿ ಮೋದಿಗೆ ನಮಸ್ಕಾರ ಹಾಕಿ ಬರ್ತಾರೆ ಅಷ್ಟೇ ಎಂದು ಕಿಡಿ ಕಾರಿದ್ದಾರೆ.