ತುಮಕೂರು: ಪ್ರೇಮಿಗಳು ಸಾವಿನಲ್ಲಿ ಒಂದಾಗಿದ್ದಾರೆ. ಮೃತ ಸುಷ್ಮಾ ಹಾಗೂ ಮಸ್ಕಲ್ ಗ್ರಾಮದ ಧನುಷ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇವರ ಪ್ರೀತಿಗೆ ಮನೆಯವರು ಕೂಡ ಸಮ್ಮತಿಯ ಮುದ್ರೆ ಒತ್ತಿದ್ರು. ಮನಮೆಚ್ಚಿದ ಹುಡುಗ, ಮನೆಯವರ ಒಪ್ಪಿಗೆಯಿಂದ ಖುಷಿಯಾಗಿದ್ದ ಜೋಡಿಗಳು ಇದೀಗ ವಿಧಿಯ ಆಟದ ಮುಂದೆ ಸೋತು ಹೋಗಿದ್ದಾರೆ. ಯುವಕನ ಸಮಾಧಿ ಪಕ್ಕ ಸುಷ್ಮಾ ಅಂತ್ಯಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದಾರೆ.
ಪ್ರೀಯಕರ ಅಪಘಾತದಲ್ಲಿ ಸಾವನಪ್ಪಿದ ನೋವು ತಾಳಲಾರದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡು, ಪ್ರೇಮಿಗಳಿಬ್ಬರು ಸಾವಿನಲ್ಲಿ ಒಂದಾಗಿದ್ದಾರೆ, ಪ್ರೀಯಕರ ಅಪಘಾತದಲ್ಲಿ ಸಾವನಪ್ಪಿದ ನೋವು ತಾಳಲಾರದೆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತುಮಕೂರು ತಾಲ್ಲೂಕಿನ ಅರೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಸುಷ್ಮಾ ಮೃತ ದುರ್ದೈವಿ.
ಮೃತ ಸುಷ್ಮಾ ಹಾಗೂ ಮಸ್ಕಲ್ ಗ್ರಾಮದ ಧನುಷ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು, ಇವರ ಪ್ರೀತಿಗೆ ಮನೆಯವರು ಕೂಡ ಸಮ್ಮತಿಯ ಮುದ್ರೆ ಒತ್ತಿದ್ರು. ಮನಮೆಚ್ಚಿದ ಹುಡುಗ, ಮನೆಯವರ ಒಪ್ಪಿಗೆಯಿಂದ ಖುಷಿಯಾಗಿದ್ದ ಜೋಡಿಗಳು ಇದೀಗ ವಿಧಿಯ ಆಟದ ಮುಂದೆ ಸೋತು ಹೋಗಿದ್ದಾರೆ.
ಮಸ್ಕಲ್ ಮೂಲದ ಧನುಷ್, ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ, ಗ್ರಾಮದಲ್ಲಿ ಜಾತ್ರೆ ಪ್ರಯುಕ್ತ, ಧನುಷ್ ಕಳೆದ ಮೇ 11ನೇ ತಾರೀಕು ಬೈಕ್ ನಲ್ಲಿ ಗ್ರಾಮಕ್ಕೆ ಬರುತ್ತಿದ್ದ ವೇಳೆ ದಾಬಸ್ಪೇಟೆ ಸಮೀಪದ ಕುಲುವನಹಳ್ಳಿ ಬಳಿ ಅಪಘಾತವಾಗಿ ಸಾವನಪ್ಪಿದ್ದಾನೆ.
ಪ್ರೀಯಕರ ಸಾವಿನಿಂದ ಆಘಾತಕ್ಕೊಳಗಾದ ಯುವತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾಳೆ. ಶನಿವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ.
ಸುಷ್ಮಾ ವಿಷ ಸೇವಿಸಿರುವುದು ಗೊತ್ತಾಗುತ್ತಿದ್ದಂತೆ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಬದುಕಿಸುವ ಪ್ರಯತ್ನ ಮಾಡಿದ್ದಾರೆ. ಆ ವೇಳೆಗಾಗಲೇ ವಿಷ ಸಂಪೂರ್ಣ ದೇಹದಲ್ಲಿ ಬೆರೆತು ಇಹಲೋಕ ತ್ಯಜಿಸಿದ್ದಾಳೆ. ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.