ಪಂಜಾಬ್ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು 2 ದಿನಗಳಿಂದ ತುಂಬಾ ಹೊಟ್ಟೆನೋವು ಎಂದು ವೈದ್ಯರ ಬಳಿಗೆ ಬಂದಿದ್ದರು, ವೈದ್ಯರು ಎಕ್ಸ್-ರೇ ಮಾಡಿ ನೋಡಿದಾಗ ಅವರ ಹೊಟ್ಟೆಯಲ್ಲಿ ಹಲವು ವಸ್ತುಗಳಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.ಅವರ ಹೊಟ್ಟೆಯಿಂದ ಇಯರ್ಫೋನ್ಗಳು, ರಾಖಿ, ದಾರಗಳು, ಮೊಳೆಗಳು, ಕೀ, ಬೀಗ, ವಾಷರ್ಗಳು ಸೇರಿದಂತೆ ಹಲವು ವಸ್ತುಗಳಿದ್ದವು.ಈ ಕುರಿತು ಮಾತನಾಡಿದ ವೈದ್ಯರು ಈ ಎಲ್ಲಾ ವಸ್ತುಗಳನ್ನು ಹೇಗೆ ತಿಂದಿದ್ದಾರೆ ಎಂಬುದು ಮಾತ್ರ ನಮಗೆ ತಿಳಿದಿಲ್ಲ, ಆದ್ರೆ ಆ ಎಲ್ಲಾ 100 ವಸ್ತುಗಳನ್ನು ನಾವು ಯಶಸ್ವಿಯಾಗಿ ಹೊರತೆಗೆದಿದ್ದೇವೆ ಇನ್ನು ಅವರಿಗೆ ಮಾನಸಿಕ ಸಮಸ್ಯೆ ಇರಬಹುದು.ಈ ವಸ್ತುಗಳು ದೀರ್ಘಕಾಲದವರೆಗೆ ಅವರ ಹೊಟ್ಟೆಯೊಳಗೆ ಇದ್ದವು ಎಂದು ಹೇಳಿದ್ದಾರೆ