Publish Date: Sat, 09 Oct 2021 (21:45 IST)
Updated Date: Sat, 09 Oct 2021 (21:47 IST)
ಕಳೆದ ಐದು ದಿನಗಳಿಂದಲೂ ತೈಲ ಬೆಲೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ 32 ಪೈಸೆ ಹೆಚ್ಚಳವಾಗಿದೆ.ಇದರಿಂದ ಲೀಟರ್ ಪೆಟ್ರೋಲ್ ದರ 107 ರೂಪಾಯಿ 46 ಪೈಸೆಗೆ ಜಿಗಿದಿದೆ.ಹಾಗೆ ಡೀಸೆಲ್ ದರ ಕೂಡ ಶತಕದಂಚಿನಲ್ಲಿದೆ.ಇಂದು ಡೀಸೆಲ್ ದರ 38 ಪೈಸೆ ಏರಿಕೆಯಾಗಿದೆ.ಇದರಿಂದ ಲೀಟರ್ ಡೀಸಲ್ 98 ರೂಪಾಯಿ 15ಪೈಸೆಗೆ ತಲುಪಿದೆ.