Publish Date: Fri, 13 Mar 2020 (18:35 IST)
Updated Date: Fri, 13 Mar 2020 (18:37 IST)
ಕೊರೊನಾ ಭೀತಿಯಿಂದಾಗಿ ನಡೆಯಬೇಕಿದ್ದ ಉದ್ಯೋಗ ಮೇಳ ಕ್ಯಾನ್ಸಲ್ ಆಗಿದ್ದರೆ, ಐತಿಹಾಸಿಕ ರಥೋತ್ಸವ ಮುಂದೂಡಲಾಗಿದೆ.
ಕೊಪ್ಪಳ ಜಿಲ್ಲಾ ಆಡಳಿತ ಆಯೋಜಿಸಿದ್ದ ಉದ್ಯೋಗ ಮೇಳ ಮತ್ತು ಐತಿಹಾಸಿಕ ಕನಕಗಿರಿಯ ಕನಕಾಚಲಪತಿ ಜಾತ್ರೆಯ ರಥೋತ್ಸವ ಮಾ. 16 ನಡೆಯಬೇಕಿತ್ತು.
ಕೊರೊನಾ ಭೀತಿಯಿಂದ ಮುಂದೂಡಲಾಗಿದೆ. ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ ಅವರು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ಮಾಡಿಕೊಂಡಿದ್ದಕ್ಕೆ ಜಾತ್ರೆ ಮುಂದೂಡದ್ದಾರೆ.
ಕೊಪ್ಪಳ ಜಿಲ್ಲಾ ಆಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.14 ರಂದು ಮಿನಿ ಉದ್ಯೋಗ ಮೇಳದ ಉದ್ಘಾಟನೆ ಇತ್ತು. ಇದೀಗ ಉದ್ಯೋಗ ಮೇಳವನ್ನು ರದ್ದು ಮಾಡಲಾಗಿದೆ.