Publish Date: Mon, 18 Feb 2019 (14:21 IST)
Updated Date: Mon, 18 Feb 2019 (15:03 IST)
ಉಡುಪಿ: ಜಮ್ಮು ಕಾಶ್ಮೀರದ ಅವಂತಿಪುರದಲ್ಲಿ ಉಗ್ರರ ದಾಳಿಗೆ ಬಲಿಯಾದ ವೀರ ಯೋಧರಿಗೆ ಉಡುಪಿ ಜಿಲ್ಲೆಯ ಯಡ್ತಾಡಿ ಕೂಡಾಲುಮನೆ ಕುಟುಂಬಸ್ಥರಿಂದ ನುಡಿ ನಮನ ಸಲ್ಲಿಸಲಾಯಿತು. ಮೊಂಬತ್ತಿ ಹಚ್ಚಿ , ಮೌನಾಚರಣೆ ಮಾಡುವ ಮೂಲಕ ಹುತಾತ್ಮರಾದ ವೀರಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಮಹಾಬಲ ಶೆಟ್ಟಿ, ಪ್ರಭಾಕರ ಶೆಟ್ಟಿ,ರಾಮಣ್ಣ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ವರದರಾಜ್ ಶೆಟ್ಟಿ, ನಿತ್ಯಾನಂದ ಶೆಟ್ಟಿ ಹಾಗೂ ಕುಟುಂಬದ ಮತ್ತಿತರು ಉಪಸ್ಥಿತರಿದ್ದು ಅಗಲಿದ ವೀರಯೋಧರಿಗೆ ನುಡಿನಮನ ಸಲ್ಲಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.