Publish Date: Wed, 16 Feb 2022 (14:47 IST)
Updated Date: Wed, 16 Feb 2022 (19:12 IST)
ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)ಅಜಿತ್ ಡೋಭಾಲ್ ಅವರ ದೆಹಲಿ ನಿವಾಸಕ್ಕೆ ನುಗ್ಗಲು ಯತ್ನಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ ವ್ಯಕ್ತಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬುಧವಾರ ಬಂಧಿಸಿದೆ.
ಅಜಿತ್ ಡೋಭಾಲ್ ಮನೆಯಲ್ಲಿ ಇರುವಾಗಲೇ ಬೆಳಿಗ್ಗೆ 7.30ರ ವೇಳೆಗೆ ಈ ಘಟನೆ ನಡೆದಿದ್ದು, ಕಾರು ಚಲಾಯಿಸಿಕೊಂಡು ನಿವಾಸದ ಆವರಣ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯನ್ನು ಸಿಐಎಸ್‌ಎಫ್ ಯೋಧರು ಬಂಧಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದರು.
ಬಂಧಿತ ವ್ಯಕ್ತಿಯನ್ನು ಶಾಂತನು ರೆಡ್ಡಿ ಎಂದು ಗುರುತಿಸಲಾಗಿದೆ. ಆತ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಯಂತೆ ಕಾಣುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಜಿತ್ ಡೋಭಾಲ್ ಅವರಿಗೆ ಝಡ್ ಫ್ಲಸ್ ಭದ್ರತೆ ನೀಡಲಾಗಿದೆ.