ಬೆಂಗಳೂರು-ಹೆಚ್ ಎಸ್ ಆರ್ ಪಿ ಪ್ಲೇಟ್ ರಿಜಿಸ್ಟರೇಷನ್ ಹೆಸರಲ್ಲಿ ವಂಚನೆಗೆ ಯತ್ನ ಹಿನ್ನೆಲೆ ದಕ್ಷಿಣ ವಿಭಾಗದ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ಪ್ರತಿಕ್ರಿಯಿಸಿದ್ದಾರೆ.ಹೆಚ್ ಎಸ್ ಆರ್ ಪಿ ಪ್ಲೇಟ್ ರಿಜಿಸ್ಟರ್ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಫೇಕ್ ಲಿಂಕ್ ಗಳು ಶೇರ್ ಆಗ್ತಿವೆ ಇದ್ರ ಬಗ್ಗೆ ಸ್ವಲ್ಪ ಎಚ್ಚರ ಇರಲಿ.ಅಫೀಸಿಯಲ್ ವೆಬ್ ಸೈಟ್ ಮೂಲಕ ಮಾತ್ರ ನೀವು ಅಪ್ಲೈ ಮಾಡಿ ಆರ್ ಟಿಓ ಸೈಟ್ ಇಂದ ಜನರೇಟ್ ಆಗಿಲ್ಲ ಅಂದ್ರೆ ಹಣ ಹಾಕ್ಬೇಡಿ.
ಒಮ್ಮೆ ವೆಬ್ ಸೈಟ್ ಸರಿಯಾಗಿದೆಯಾ ಏನು ಅಂತಾ ನೋಡಿಕೊಂಡು ಪಾವತಿಸಿ.ಏನಾದರು ಸಮಸ್ಯೆ ಇದ್ದರೆ ಕೂಡಲೆ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ.ನಾವು ಕೂಡ ಇದರ ಬಗ್ಗೆ ಸೈಬರ್ ಕ್ರೈಂ ಠಾಣೆಯವ್ರಿಗೆ ಮಾಹಿತಿ ನೀಡ್ತೀವಿ.ಹೆಚ್ ಎಸ್ ಆರ್ ಪಿ ರಿಜಿಸ್ಟರೇಷನ್ ಬಗ್ಗೆ ಗಮನವಹಿಸಿ ಎಂದು ದಕ್ಷಿಣ ವಿಭಾಗದ ಸಂಚಾರಿ ಡಿಸಿಪಿ ಶಿವಪ್ರಕಾಶ್ ದೇವರಾಜ್ ಹೇಳಿದ್ದಾರೆ.