Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಐಟಿ ಇಲಾಖೆಯಿಂದ ಸಮನ್ಸ್ ಬಂದ ಹಿನ್ನಲೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.
ನಾನು ಐಟಿ ಇಲಾಖೆಯ ಅಧಿಕಾರಿಗಳ ಎದುರು ಇಂದು ಹಾಜರಾಗುತ್ತಿರುವುದು ನಿಜ. ಆದರೆ ನನಗೆ ಸಮನ್ಸ್ ಬಂದ ಹಿನ್ನಲೆಯಲ್ಲಿ ಹಾಜರಾಗುತ್ತಿಲ್ಲ. ನಾನು ಐಟಿ ಇಲಾಖೆಗೆ ಕೆಲವು ದಾಖಲೆಗಳನ್ನು ಒದಗಿಸಬೇಕಿತ್ತು. ಅದಕ್ಕೆ ಸ್ಪಷ್ಟೀಕರಣ ನೀಡಲು ಹಾಜರಾಗುತ್ತಿದ್ದೇನೆ ಎಂದು ಸಚಿವರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮೊದಲು ಡಿಕೆ ಶಿವಕುಮಾರ್ ಗೆ ಐಟಿ ಇಲಾಖೆ ತನಿಖೆಗೆ ಹಾಜರಾಗಲು ಸಮನ್ಸ್ ನೀಡಿತ್ತು ಎಂದು ವರದಿಯಾಗಿತ್ತು. ಆದರೆ ಅದನ್ನು ಅವರೀಘ ತಳ್ಳಿ ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ