Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಂ.ಬಿ.ಪಾಟೀಲ್ ಮಾತ್ರವಲ್ಲ ಬಿಜೆಪಿ, ಪತ್ರಕರ್ತರ ಫೋನ್ ಕೂಡ ಟ್ಯಾಪ್..?

ಎಂ.ಬಿ.ಪಾಟೀಲ್ ಮಾತ್ರವಲ್ಲ ಬಿಜೆಪಿ, ಪತ್ರಕರ್ತರ ಫೋನ್ ಕೂಡ ಟ್ಯಾಪ್..?
ಬೆಂಗಳೂರು , ಸೋಮವಾರ, 6 ನವೆಂಬರ್ 2017 (19:13 IST)
ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ಅಷ್ಟೇ ಅಲ್ಲ ಹಲವು ಸಚಿವರ ಮೊಬೈಲ್ ಟ್ಯಾಪ್ ಆಗಿದ್ದು, ಬಿಜೆಪಿ ನಾಯಕರ ಮೊಬೈಲ್ ಸಂಖ್ಯೆಗಳೂ ಟ್ಯಾಪ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ಸಂಖ್ಯೆ ಟ್ಯಾಪ್ ಆಗಿದೆಯಂತೆ. ಆದರೆ ಯಾರು ಟ್ಯಾಪ್ ಮಾಡ್ತಿದ್ದಾರೆ ಎಂದು ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ ಎನ್ನಲಾಗಿದೆ.

ರಾಜಕಾರಣಿಗಳಲ್ಲದೆ ಪತ್ರಕರ್ತರ ಫೋನ್ ಗಳು ಕೂಡ ಟ್ಯಾಪ್ ಆಗ್ತಿವೆ. ಕೇಂದ್ರ ಸರ್ಕಾರ ಟ್ಯಾಪ್ ಮಾಡ್ತಿದ್ಯೋ ಅಥವಾ ರಾಜ್ಯ ಸರ್ಕಾರವೇ ಟ್ಯಾಪ್ ಮಾಡ್ತಿದ್ಯೋ ಯಾರಿಗೂ ಗೊತ್ತಿಲ್ಲ. ಈ ಹಿಂದೆ ರಾಜ್ಯ ಪೊಲೀಸರು ಫೋನ್ ಟ್ಯಾಪ್ ಮಾಡಿದ್ರಿಂದಲೇ ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲ ತೆಲಗಿ ಬಂಧನ ಸಾಧ್ಯವಾಗಿತ್ತು. ಇಲ್ಲದಿದ್ರೆ ಕರೀಂ ಕಾಲ ತೆಲಗಿ ದೇಶ ಬಿಟ್ಟು ಪರಾರಿಯಾಗ್ತಿದ್ದ.

ಹೆಚ್ಚಾಗಿ ಸಿಐಡಿ, ಐಟಿ, ಸಿಬಿಐ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಫೋನ್ ಟ್ಯಾಪ್ ಮಾಡ್ತಾರೆ. ಕೆಲ ಅನಿವಾರ್ಯ ಸಂದರ್ಭಗಳಲ್ಲಿ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿ ಅನುಮತಿ ಪಡೆದು ರಾಜ್ಯ ಪೊಲೀಸರು ಸಹ ಟೆಲಿಫೋನ್ ಟ್ಯಾಪ್ ಮಾಡ್ತಾರೆ. ಈ ಹಿಂದೆ ಶಾಸಕರು, ಸಚಿವರು, ಅಧಿಕಾರಿಗಳ ಬಳಿ BSNL ಸಂಖ್ಯೆ ಮಾತ್ರ ಇತ್ತು. ಆಗ ಟ್ಯಾಪ್ ಮಾಡಬೇಕಂದ್ರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅನುಮತಿ ಪಡೆದು ಟ್ಯಾಪ್ ಮಾಡಬೇಕಿತ್ತು. ಆದರೆ ರಾಜಕಾರಣಿಗಳ ಫೋನ್, ಪತ್ರಕರ್ತರ ಫೋನ್ ಟ್ಯಾಪ್ ಮಾಡ್ತಿರೋದು ಯಾರು ಎಂದು ತಿಳಿದುಬಂದಿಲ್ಲ ಎನ್ನಲಾಗಿದೆ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರೂ ತಮ್ಮ ಕಾರ್ಯದರ್ಶಿ ಮೂಲಕ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಪ್ರಧಾನಿಯಾಗಿದ್ದ ಚಂದ್ರಶೇಖರ್ ಮಾತುಕತೆಯನ್ನ ಟ್ಯಾಪ್ ಮಾಡಿ ಸಿಕ್ಕಿ ಬಿದ್ದಿದ್ರು. ದೇವೇಗೌಡರು ಫೋನ್ ಟ್ಯಾಪಿಂಗ್ ವಿರುದ್ಧ ಹೋರಾಟ ನಡೆಸಿದ ಹಿನ್ನೆಲೆ ರಾಮಕೃಷ್ಣ ಹೆಗಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಂಟ್‌ ಜೇಬಿನಲ್ಲಿಯೇ ಸ್ಫೋಟಗೊಂಡ ಮೊಬೈಲ್: ಯುವಕನ ಗುಪ್ತಾಂಗಕ್ಕೆ ಗಂಭೀರ ಗಾಯ (ವಿಡಿಯೋ ನೋಡಿ)