ಥಟ್ಟನೆ ನೋಡಿದ್ರೆ ಇದು ಯಾವುದೋ ವಿದೇಶಿ ರಸ್ತೆ, ನೋಟ ಇರಬಹುದು ಅಂತ ನೀವು ಅಂದುಕೊಂಡಿದ್ರೆ ನಿಮ್ಮ ಕಲ್ಪನೆ ತಪ್ಪು. ಏಕಂದ್ರೆ ಈ ಸೌಂದರ್ಯ ಇರುವುದು ಅಪ್ಪಟ ಕರುನಾಡಿನಲ್ಲಿ.
ಮೇ ಫ್ಲವರ್ ಎಂದೇ ಕರೆಯುವ ಗುಲ್ ಮೊಹರ್‌ನ ರಂಗಿಗೆ ಗಡಿ ಜಿಲ್ಲೆ ಚಾಮರಾಜನಗರ ಕಲರ್ ಕಲರ್ ಫುಲ್ ಆಗಿದೆ. ರಸ್ತೆಯ ಎರಡು ಬದಿಗಳ ಇಕ್ಕೆಲಗಳಲ್ಲಿ ಕೆಂಬಣ್ಣದ ಡೆಕೋರೇಷನ್ ತರ ಗಿಡಗಳು ಹೂ ಬಿಟ್ಟಿವೆ.
ಚಾಮರಾಜನಗರ ಜಿಲ್ಲೆಯ ಶಿಂಡನಪುರ, ಗುಂಡ್ಲುಪೇಟೆ, ಬೇಗೂರು, ಮೇಲುಕಾಮನಹಳ್ಳಿ, ಹಂಗಳದ ರಸ್ತೆಗಳ ಉದ್ದಕ್ಕೂ ಗುಲ್ ಮೊಹರ್ ಬೆಡಗು-ಸೊಬಗಿಗೆ ದಾರಿ ಹೋಕರು ಮಾರುಹೋಗಿ, ನಿಂತು ವಿಶ್ರಾಂತಿ ಪಡೆದು ತೆರಳುತ್ತಿದ್ದಾರೆ.
ಕೆಂಪು ಚಪ್ಪರದಂತೆ ಭಾಸವಾಗುವ ಗುಲ್ ಮೋಹರ್ ಯುವಜನತೆಯ ಸೆಲ್ಫಿ ಸ್ಫಾಟಾಗಿ ಕೂಡ ಪರಿಣಮಿಸಿದೆ.
ಕ್ಯಾಮರಾ ಕಣ್ಣಲ್ಲಿ ಹೂವಿನ ಅಂದ ಮತ್ತಷ್ಟು ಹೆಚ್ಚಾಗಿ ಕಾಣಿಸುತ್ತದೆ.