Publish Date: Tue, 11 Apr 2023 (09:36 IST)
Updated Date: Tue, 11 Apr 2023 (07:39 IST)
ಬೆಂಗಳೂರು : ನಾನು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ, ಅದು ಮುಗಿದ ಅಧ್ಯಾಯ, ನಾನು ಕೇಳಿರೋದು ಚಾಮರಾಜನಗರ, ಗೋವಿಂದರಾಜನಗರವಾಗಿದೆ ಎಂದು ಸಚಿವ ವಿ. ಸೋಮಣ್ಣ ತಿಳಿಸಿದರು.
ಇದರಲ್ಲಿ ಚಾಮರಾಜನಗರ, ಗೋವಿಂದರಾಜನಗರದಲ್ಲಿ ಒಂದನ್ನು ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ವರುಣಾದಿಂದ ಸ್ಪರ್ಧೆ ಇಲ್ಲ. ಇದು ಹೈಕಮಾಂಡ್ಗೆ ಕೂಡ ಗೊತ್ತಿದೆ. ಹೈಕಮಾಂಡ್ ಏನು ಮಾಡುತ್ತೆ ನೋಡೋಣ ಎಂದು ಹೇಳಿದರು.
ಬೇರೆ ಅವರ ಮಕ್ಕಳಿಗೆ ಟಿಕೆಟ್ ಕೊಟ್ಟರೆ ನನ್ನ ಮಗನಿಗೂ ಟಿಕೆಟ್ ಕೊಡಿ, ಸಾಕಷ್ಟು ನಾಯಕರ ಮಕ್ಕಳು ಟಿಕೆಟ್ ಕೇಳುತ್ತಿದ್ದಾರೆ. ಅದಕ್ಕೆ ನಾನು ಕೇಳಿದ್ದೀನಿ, ಕೇಳೋದ್ರಲ್ಲಿ ಏನು ತಪ್ಪಿಲ್ಲ. ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದೀನಿ, ಯಾರ್ಯಾರಿಗೆ ಮನವರಿಕೆ ಮಾಡಬೇಕೋ ಅವರಿಗೆ ಮನವರಿಕೆ ಆಗಿದೆ. ಹೇಗೆ ಮಾಡ್ತಾರೆ ನೋಡೋಣ. ನನ್ನ ಮಗನಿಗೂ ಕೊಡ್ತಾರಾ ನೋಡ್ತೀನಿ. ಬೇರೆ ಅವರಿಗೆ ಕೊಡೋದ್ರಿಂದ ನಾನು ಗುಬ್ಬಿಗೆ ಟಿಕೆಟ್ ಕೊಡಿ ಅಂತ ಕೇಳಿದ್ದೀನಿ ಎಂದರು.