ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆಗಾಗಿ ದಿನಾಂಕ 1-8-2018 ರಂದು ಉತ್ತರ ಕರ್ನಾಟಕ ಪ್ರತ್ಯೆಕ ರಾಜ್ಯ ಹೋರಾಟ ಸಮಿತಿ ಉತ್ತರ ಕರ್ನಾಟಕ ರಾಜ್ಯ ರೈತ ಸಂಘದಿಂದ ಬೆಳಗಾವಿಯ ಸುವರ್ಣಸೌಧದ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ರಾಜ್ಯ ಅಧ್ಯಕ್ಷರಾದ ಸೋಮಶೇಖರ್ ಕೋತಂಬರಿ ತಿಳಿಸಿದ್ದಾರೆ.
ಕಳೆದ ಏಳು ದಶಕಗಳಿಂದ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದ್ದು, ಸರ್ವಾಂಗೀಣ ಅಭಿವೃದ್ಧಿಗಾಗಿ ಉದ್ಯೋಗ ಆಧಾರಿತ ಶಿಕ್ಷಣ, ನೀರಾವರಿ, ಹಸಿರು ಕ್ರಾಂತಿ, ಐಟಿಯಂತಹ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಮಹಾದಾಯಿ ಯೋಜನೆಯನ್ನು ನಿರ್ಲಕ್ಷಿಸಲಾಗಿದೆ, ನಂಜುಂಡಪ್ಪ ವರದಿಯು ಅನಿಷ್ಟಾನಗೊಂಡಿಲ್ಲ.
ಇವೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಕ್ರಾಂತಿಕಾರಿ ಚಳುವಳಿಯ ಅಂದೋಲನವನ್ನು ಉತ್ತರ ಕರ್ನಾಟಕ ಪ್ರತ್ಯೆಕ ರಾಜ್ಯ ಹೋರಾಟ ಸಮಿತಿ ವತಿಯಿಂದ ರೂಪಿಸುತ್ತೇವೆ ಎಂದು ತಿಳಿಸಿದ್ದಾರೆ.