Publish Date: Sun, 19 Mar 2023 (16:41 IST)
Updated Date: Sun, 19 Mar 2023 (16:49 IST)
ನಾಳೆ ಆಟೋ ಚಾಲಕರ ಮುಷ್ಕರ ಹಿನ್ನೆಲೆ ನಮ್ಮ ಯಾತ್ರಿ ಆಟೋ ಚಾಲಕರಿಂದ ಮುಷ್ಕರಕ್ಕೆ ಬೆಂಬಲ ಸಿಕ್ಕಿಲ್ಲ.ನಮ್ಮ ಯಾತ್ರಿ ಆಟೋ ಚಾಲಕರು ಎಂದಿನಂತೆ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.ಹಬ್ಬದ ಟೈಮ್ ನಲ್ಲಿ ಜನರಿಗೆ ಆಟೋ ತುಂಬಾ ಅವಶ್ಯಕ.ರ್ಯಫಿಡೋ, ಓಲಾ, ಇರೋ ಹಾಗೆ ನಮ್ಮ ಯಾ ತ್ರಿಯನ್ನು ಜನ ಉಪಯೋಗಿಸ್ತಿದ್ದಾರೆ.ನಾಳೆಯಿಂದ ಹಬ್ಬದ ವಾತಾವರಣ ಇರೋದ್ರಿಂದ ಆಟೋ ಚಾಲಕರಿಗೆ ಒಳ್ಳೆಯ ಲಾಭ ಇದೆ.ಹಬ್ಬದ ಸಮಯದಲ್ಲಿ ಪ್ರತಿಭಟನೆ ಸರಿ ಅಲ್ಲ.ಹಬ್ಬದ ನಂತರ ಪ್ರತಿಭಟನೆಯನ್ನ ಮಾಡಲಿ ಎಂತ ನಮ್ಮ ಯಾತ್ರಿ ಚಾಲಕರು ಹೇಳಿದ್ದಾರೆ.