Publish Date: Wed, 09 Feb 2022 (18:03 IST)
Updated Date: Wed, 09 Feb 2022 (15:37 IST)
ಹಿಜಬ್ ವಿವಾದದ ಸಂಬಂಧ ಇದುವರೆಗೆ ಯಾವುದೇ ವಿದ್ಯಾರ್ಥಿಗಳನ್ನು ಬಂಧಿಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾ ನೇಂದ್ರ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ಅಹಿತಕರ ಘಟನೆಗಳು ಕಾನೂನು ಬಾಹಿರ ಕೆಲಸ ಗಳು ನಡೆದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ.
ವಿದ್ಯಾರ್ಥಿಗಳನ್ನು ಬಂಧಿಸಿಲ್ಲ. ನಿನ್ನೆಯ ಗಲಾಟೆ ಬಗ್ಗೆ ಆಯಾ ವ್ಯಾಪ್ತಿ ಯ ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಹೊರಗಿನ ಕೆಲವರ ಬಂಧನ ಮಾಡಲಾಗಿದೆ. ಇದು ಸರ್ಕಾರದ ವೈಫಲ್ಯ ಅಲ್ಲ. ಇದೆಲ್ಲ ಪ್ರತಿ ಪಕ್ಷಗಳ ಪಿತೂರಿ. ಇದೆಲ್ಲದರ ಹಿಂದೆ ಪ್ರತಿಪಕ್ಷಗಳಿವೆ ಎಂದು ಹೇಳಿದರು. ಇನ್ನು ರಾಜ್ಯ ಸರ್ಕಾರ ಕೋರ್ಟ್ ತೀರ್ಪಿನ ನಿರೀಕ್ಷೆ ಯಲ್ಲಿ ದ್ದು, ಕೋರ್ಟ್ ತೀರ್ಪಿನ ಪಾಲನೆಗೆ ಕ್ರಮ ವಹಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
geetha
Publish Date: Wed, 09 Feb 2022 (18:03 IST)
Updated Date: Wed, 09 Feb 2022 (15:37 IST)