Webdunia - Bharat's app for daily news and videos

Install App

ಬಿಬಿಎಂಪಿ ಮೈತ್ರಿ ಬಗ್ಗೆ ಯಾರ ಬಳಿಯೂ ಚರ್ಚಿಸಿಲ್ಲ: ಸಿಎಂ ಸಿದ್ದರಾಮಯ್ಯ

Webdunia
ಸೋಮವಾರ, 11 ಸೆಪ್ಟಂಬರ್ 2017 (17:20 IST)
ಬೆಂಗಳೂರು: ಬಿಬಿಎಂಪಿ ಮೈತ್ರಿ ಮುಂದುವರಿಕೆ ಬಗ್ಗೆ ಇನ್ನು ನಾವು ಯಾರ ಬಳಿಯೂ ಮಾತನಾಡಿಲ್ಲ ಎಂದು ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಮೈತ್ರಿ ಬಗ್ಗೆ ಒಂದು ಬಾರಿ ದೇವೇಗೌಡರ ಜೊತೆ ರೋಷನ್ ಬೇಗ್ ಚರ್ಚೆ ಮಾಡಿದ್ದಾರೆ ಅಷ್ಟೆ. ಮೇಯರ್ ಸ್ಥಾನ ಕೊಟ್ರೆ ಬೆಂಬಲ ಅನ್ನೋ ಕುಮಾರಸ್ವಾಮಿ‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ನಾವು ಇನ್ನೂ ಮಾತೇ ಆಡಿಲ್ಲ. ನೀವೇ ವಕಾಲತ್ತು ವಹಿಸ್ತೀರಾ ಅಂತ ಗರಂ ಆದ್ರು. ಕೂಡಲೇ ಶಾಂತರಾದ ಸಿಎಂ, ನಾವು ಇನ್ನು ಮಾತನಾಡಿಲ್ಲ. ಮಾತಾಡಿದ ಬಳಕ‌ ಎಲ್ಲ ನಿರ್ಧಾರ ಆಗುತ್ತೆ ಎಂದು ಹೇಳಿದರು.

ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಸಾಕಷ್ಟು ಸಚಿವರ ಮೇಲೆ ಆರೋಪಗಳಿವೆ. ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಕೇಂದ್ರ ಮಂತ್ರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಮೊದಲು ಅವರು ರಾಜೀನಾಮೆ ನೀಡಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ.

ಬೆಂಗಳೂರು ಮಳೆ ಹಾನಿಗೆ ಸರ್ಕಾರದ ವೈಫಲ್ಯವೇ ಕಾರಣ ಎಂಬ ಬಿಎಸ್ ವೈ ಆರೋಪ ಸುಳ್ಳು. ಅವರು ಸುಳ್ಳು ಹೇಳ್ತಾರೆ. ಹೀಗಾಗಿ ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡೋದು ಬಿಟ್ಟಿದ್ದೀನಿ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments